ಫೇಸ್‌ಬುಕ್‌ ಸಿಇಓ ಜುಕರ್‌ಬರ್ಗ್‍ ಕೆಲಸಕ್ಕೆ ಕುತ್ತು

ಗುರುವಾರ, 9 ಫೆಬ್ರವರಿ 2017 (12:07 IST)
ಜನಪ್ರಿಯ ಸಾಮಾಜಿಕ ಮಾಧ್ಯಮ ಫೇಸ್‌ಬುಕ್ ಸಿಇಓ ಮಾರ್ಕ್ ಜುಕರ್‌ಬರ್ಗ್‌ರನ್ನು ಕೆಲಸದಿಂದ ತೆಗೆಯಬೇಕೆಂದು ಫೇಸ್‌ಬುಕ್ ಷೇರುದಾರರು ಆಗ್ರಹಿಸಿದ್ದಾರೆ. ನಕಲಿ ಸಮಾಚಾರಕ್ಕೆ ಫೇಸ್‌ಬುಕ್ ವೇದಿಕೆಯಾಗಿ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಜುಕರ್‌ಬರ್ಗ್‌ರನ್ನು ತೊಲಗಿಸಬೇಕೆಂದು ಆಗ್ರಹಿಸಲಾಗಿದೆ.
 
ಜುಕರ್ ಬರ್ಗ್ ಸ್ಥಾನಕ್ಕೆ ಸ್ವತಂತ್ರ ಸಿಇಓರನ್ನು ನೇಮಿಸಬೇಕೆಂದು 333,000 ಮಂದಿ ಕೇಸು ನಮೂದಿಸಿದ್ದಾರೆಂದು ವೆಂಚರ್ ಬೀಟ್ ತಿಳಿಸಿದೆ. ಆದರೆ ಅವರಲ್ಲಿ ಇರುವ ಹೂಡಿಕೆದಾರರ ಸಂಖ್ಯೆ ಕೇವಲ 1,500 ಮಾತ್ರ ಎಂದು ಖೇದಕರ ಸಂಗತಿ.
 
2012ರಿಂದ ಜುಕರ್ ಬರ್ಗ್ ಫೇಸ್‌ಬುಕ್ ಕಾರ್ಯನಿರ್ವಹಣ ಅಧಿಕಾರಿಯಾಗಿ, ಮಂಡಳಿ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಫೇಸ್‍ಬುಕ್‌ನಲ್ಲಿ ಅವರಿಗೆ ಹೆಚ್ಚು ಷೇರುಗಳಿವೆ. ಆದಕಾರಣ ಈ ಕೇಸು ಫೇಸ್‌ಬುಕ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನಿಪುಣರು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ