ಭಾರತದಲ್ಲಿ ಎಕ್ಸ್‌ಪ್ರೆಸ್ ವೈಫೈ : ಫೇಸ್‌ಬುಕ್

ಬುಧವಾರ, 30 ನವೆಂಬರ್ 2016 (08:46 IST)
ನಮ್ಮ ದೇಶದ ಗ್ರಾಮೀಣ ಭಾಗದ ಜನಕ್ಕೆ ಅತ್ಯುತ್ತಮ ಇಂಟರ್‌ನೆಟ್ ಸೇವೆಗಳನ್ನು ಒದಗಿಸಲು ಫೇಸ್‌ಬುಕ್ ಅತ್ಯಾಧುನಿಕ ತಂತ್ರಜ್ಞಾನವನ್ನ ಬಳಸಲು ಮುಂದಾಗಿದೆ. ಎಕ್ಸ್‌ಪ್ರೆಸ್ ವೈಫೈಯನ್ನ ಭಾರತೀಯರಿಗೆ ಕಲ್ಪಿಸಲಿದೆ ಎಂದು ಕಂಪನಿ ಮೂಲಗಳು ಹೇಳಿವೆ.
 
ಇದಕ್ಕಾಗಿ ಸ್ಥಳೀಯ ಇಂಟರ್ನೆಟ್ ಪ್ರೊವೈಡರ್‌ಗಳ ಜೊತೆಗೆ ಇತರೆ ಸಂಸ್ಥೆಗಳ ಸಹಾಯ ಪಡೆಯುವುದಾಗಿ ಹೇಳಿದೆ. ಶೀಘ್ರದಲ್ಲೇ ಈ ವೈಫೈಯನ್ನ ಜನರಿಗೆ ಸಿಗುವಂತೆ ಮಾಡ್ತೀವಿ ಎಂದು ಫೇಸ್‍ಬುಕ್ ಪ್ರಕಟಿಸಿದೆ.
 
ಇದರಿಂದ ಸ್ಥಳೀಯ ಇಂಟರ್ನೆಟ್ ಪ್ರೊವೈಡರ್‌ಗಳಿಗೂ ಅನುಕೂಲವಾಗಲಿದ್ದು, ಸ್ಥಿರ ಆದಾಯ ತಂದುಕೊಡಲಿದೆ. ಆದರೆ ಈ ವೈಫೈ ಕೂಡ ಫ್ರೀ ಬೇಸಿಕ್ಸ್ ತರಹ ಸೀಮಿತ ಸೇವೆಗಳನ್ನ ಮಾತ್ರ ಕೊಡುತ್ತಾ ಅಥವಾ ಪೂರ್ಣ ಪ್ರಮಾಣದ ಸೇವೆಗಳನ್ನ ಕೊಡಲಿದ್ದಾರಾ ಅನ್ನೋದನ್ನ ಫೇಸ್‌ಬುಕ್ ಸ್ಪಷ್ಟಪಡಿಸಿಲ್ಲ.
 
ಫ್ರೀ ಫೇಸ್‌ಬುಕ್ ಇಂಟರ್ನೆಟ್ ಡಾಟ್ ಆರ್ಗ್ ಕೆಲವೊಂದು ವೆಬ್‌ಸೈಟ್‍ಗಳಿಗೆ ಮಾತ್ರ ಸೀಮಿತವಾಗಿದೆ ಅನ್ನೋದು ಗೊತ್ತಿರುವ ಸಂಗತಿ. ಎಕ್ಸ್‌ಪ್ರೆಸ್ ವೈಫೈ ಮೂಲಕ ಮಾರುಮೂಲೆಯ ಹಳ್ಳಿಗಳಿಗೂ ಅತ್ಯುತ್ತಮವಾದ ಇಂಟರ್‌ನೆಟ್ ಸೇವೆಗಳನ್ನ ಕೊಡಲು ಸಾಧ್ಯವಾಗುತ್ತದೆ ಎನ್ನುತ್ತಿವೆ ಫೇಸ್‍ಬುಕ್ ಮೂಲಗಳು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ