ಬ್ಯಾಂಕ್‌ಗಳಿಗೆ ಪ್ಯಾಕೇಜ್ ಕುರಿತು ಹಣಕಾಸು ಸಚಿವಾಲಯ ಚಿಂತನೆ

ಬುಧವಾರ, 1 ಜುಲೈ 2015 (15:51 IST)
ವಸೂಲಾಗದ ಸಾಲಗಳಿಂದ ಜರ್ಜರಿತವಾದ ಬ್ಯಾಂಕ್‌ಗಳಿಗೆ ನೆರವಾಗಲು ಹಣಕಾಸು ಸಚಿವಾಲಯ ಸಮಗ್ರ ಪ್ಯಾಕೇಜ್  ಬಗ್ಗೆ ಪರಿಶೀಲಿಸುತ್ತಿದೆ ಎಂದು ಹಣಕಾಸು ರಾಜ್ಯ ಸಚಿವ ಜಯಂತ್ ಸಿನ್ಹಾ ಬುಧವಾರ ತಿಳಿಸಿದರು. 
 
ಕಳೆದ ಮೂರು ವರ್ಷಗಳಿಂದ ಆರ್ಥಿಕ ಹಿಂಜರಿತದ ನಡುವೆ ವಸೂಲಾಗದ ಸಾಲಗಳಿಂದ ಬ್ಯಾಂಕ್‌ಗಳು ಮತ್ತಷ್ಟು ಸಾಲ ನೀಡುವುದಕ್ಕೆ ವಿಫಲವಾಗುತ್ತಿವೆ. ರಿಸರ್ವ್ ಬ್ಯಾಂಕ್ ಮೂರು ಬಾರಿ ಬಡ್ಡಿ ದರಗಳನ್ನು ಕಡಿತ ಮಾಡಿದ್ದರೂ ಬ್ಯಾಂಕ್‌ಗಳಿಗೆ ಹೆಚ್ಚಿನ ಸಾಲ ನೀಡುವುದಕ್ಕೆ ಸಾಧ್ಯವಾಗುತ್ತಿಲ್ಲ.  ಇದರಿಂದ ಮೂಲಸೌಲಭ್ಯ ಮುಂತಾದ ಪ್ರಮುಖ ಕ್ಷೇತ್ರಗಳನ್ನು ಪುನಶ್ಚೇತನಗೊಳಿಸುವ ಸರ್ಕಾರದ ಯೋಜನೆಗೆ ಅಡ್ಡಿಯಾಗಿದೆ. 
 
ಆರ್‌ಬಿಐ ಮೂರನೇ ಬಾರಿಗೆ ಬ್ಯಾಂಕ್ ಬಡ್ಡಿದರಗಳನ್ನು ಕಡಿತಮಾಡಿದ್ದು, ಬ್ಯಾಂಕ್‌ಗಳಿಗೆ ಕೂಡ ಗ್ರಾಹಕರ ಗೃಹ, ವಾಹನ ಸಾಲ ಮತ್ತಿತರ ಸಾಲಗಳ ಮೇಲಿನ ಬಡ್ಡಿ ದರಗಳಲ್ಲಿ ಕಡಿತ ಮಾಡಬೇಕೆಂದು ಸೂಚಿಸಿತ್ತು. 

ವೆಬ್ದುನಿಯಾವನ್ನು ಓದಿ