ಟಿಕೆಟ್‌ರಹಿತ ಪ್ರಯಾಣ ತಪ್ಪಿಸುವುದಕ್ಕೆ ಉಪಾಯ ಹುಡುಕಿ: ಸುರೇಶ್ ಪ್ರಭು ಸಲಹೆ

ಮಂಗಳವಾರ, 30 ಜೂನ್ 2015 (20:03 IST)
ರೈಲುಗಳಲ್ಲಿ ಟಿಕೆಟ್ ರಹಿತ ಪ್ರಯಾಣ ಮಾಡುವುದನ್ನು ತಪ್ಪಿಸಲು ಪೂರ್ಣ ಸ್ವರೂಪದ ವಿಧಾನ ರೂಪಿಸುವಂತೆ ರೈಲ್ವೆ ಸಚಿವ ಸುರೇಶ್ ಪ್ರಭು ಐಐಟಿ ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ.

ಐಐಟಿ ಹಳೆ ವಿದ್ಯಾರ್ಥಿಗಳು ಮತ್ತು ಹಾಲಿ ವಿದ್ಯಾರ್ಥಿಗಳ ಕೂಟ ಮತ್ತು ಇತರ ಪ್ರಮುಖ ಸಂಸ್ಥೆಗಳಾದ ರಾಷ್ಟ್ರೀಯ ಕಾನೂನು ವಿವಿ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ರೈಲ್ವೆಯಲ್ಲಿ ಅನೇಕ ಸವಾಲುಗಳಿದ್ದು, ಅದನ್ನು ಪರಿಹರಿಸಬೇಕಿದೆ. ಆದರೆ ಅದನ್ನು ನಿಭಾಯಿಸುವುದು ಹೇಗೆ ಎನ್ನುವುದು ಈಗಿರುವ ಪ್ರಶ್ನೆಯಾಗಿದೆ. 
 
ಭಾರತೀಯ ರೈಲ್ವೆಯಲ್ಲಿ ಯುವಜನರನ್ನು ತೊಡಗಿಸುವ ಗುರಿ ಹೊಂದಿರುವ ಪ್ರಭು, ರೈಲ್ವೆಯಲ್ಲಿ ಸೌಲಭ್ಯಗಳ ಸುಧಾರಣೆಗೆ ನಾವೀನ್ಯದ ಉಪಾಯಗಳನ್ನು ಸೂಚಿಸುವಂತೆ ತಿಳಿಸಿದರು.

ನೀರಿನ ಕೊರತೆ ಸಮಸ್ಯೆಯಾಗಿರುವುದರಿಂದ ನೀರನ್ನು ಬಳಸದೇ ಅಥವಾ ಕಡಿಮೆ ನೀರನ್ನು ಬಳಸಿ ದುರ್ವಾಸನೆರಹಿತ ಟಾಯ್ಲೆಟ್ ನಿರ್ಮಾಣ ಸಾಧ್ಯವೇ ಎಂದು ಸುರೇಶ್ ಪ್ರಭು ಪ್ರಶ್ನಿಸಿದರು.  ರೈಲಿನಲ್ಲಿ ಟಿಕೆಟಿಲ್ಲದೇ ಪ್ರಯಾಣವನ್ನು ಪ್ರಸ್ತಾಪಿಸಿ, ಟಿಕೆಟ್ ರಹಿತ ಪ್ರಯಾಣವನ್ನು ತಪ್ಪಿಸುವುದು ಹೇಗೆ, ಅದಕ್ಕೆ ಪೂರ್ಣಸ್ವರೂಪದ ಪರಿಹಾರವಿದೆಯೇ ಎಂದು ಪ್ರಶ್ನಿಸಿದರು. 

ವೆಬ್ದುನಿಯಾವನ್ನು ಓದಿ