ಆಂಧ್ರ, ತೆಲಂಗಾಣಗಳ ಆಮಿಷ ತಡೆಯಲು ಹೆಚ್ಚಿನ ಅನುಕೂಲಕ್ಕೆ ಎಫ್‌ಕೆಸಿಸಿಐ ಮನವಿ

ಮಂಗಳವಾರ, 3 ಮಾರ್ಚ್ 2015 (11:37 IST)
ರಾಜ್ಯದಲ್ಲಿ ಸುಸ್ಥಿರ ಕೈಗಾರಿಕೆಗಳಿಗಾಗಿ 12 ಅಂಶಗಳ ಬೇಡಿಕೆಯನ್ನು ಕೈಗಾರಿಕೋದ್ಯಮಿಗಳ ಸಂಘ ಎಫ್‌ಕೆಸಿಸಿಐ ಮಂಡಿಸಿದೆ.  ರಾಜ್ಯದ ಕೈಗಾರಿಕೆಗಳನ್ನು ಆಂಧ್ರ ಮತ್ತು ತೆಲಂಗಾಣಗಳು ತಮ್ಮ ಕಡೆ ಸೆಳೆಯಲು ಹೆಚ್ಚಿನ ಆಮಿಷ ಒಡ್ಡುತ್ತಿವೆ. ಆದ್ದರಿಂದ ಅನಾರೋಗ್ಯಕರ ಸ್ಪರ್ಧೆಯನ್ನು ತಡೆಯಲು  ಈಗಲಾದರೂ ರಾಜ್ಯವು ಕೈಗಾರಿಕೆಗಳಿಗೆ ಹೆಚ್ಚಿನ ಅನುಕೂಲ ಒದಗಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಅವರು ಮನವಿ ಮಾಡಿದ್ದಾರೆ.

ರಾಜ್ಯದ ಕೈಗಾರಿಕೆಗಳಿಗೆ ಆಂಧ್ರ ಮತ್ತು ತೆಲಂಗಾಣ ಸರ್ಕಾರಗಳು ಗಾಳ ಹಾಕುತ್ತಿರುವುದು ತಿಳಿಯದ ಸಂಗತಿಯೇನಲ್ಲ. ತೆರಿಗೆ ವಿನಾಯಿತಿ, ಕಡಿಮೆ ದರದಲ್ಲಿ ಭೂಮಿ ಮುಂತಾದ ಆಮಿಷಗಳನ್ನು ಒಡ್ಡಿ ಆಂಧ್ರ, ತೆಲಂಗಾಣಗಳು ಸೆಳೆಯುತ್ತಿವೆ

. ಈ ಹಿನ್ನೆಲೆಯಲ್ಲಿ  ಕೈಗಾರಿಕೆಗಳು ಬೇರೆ  ಬೇರೆ ರಾಜ್ಯಗಳಿಗೆ ಹೋಗದಂತೆ ತಡೆಯಲು ಸಿಎಂ ಈ ಬಾರಿ ಮಂಡಿಸುವ ಬಜೆಟ್‌ನಲ್ಲಿ  ಕಡಿಮೆ ಬೆಲೆಯಲ್ಲಿ ಭೂಮಿಯನ್ನು ಕೊಡಬೇಕೆಂದೂ ಮತ್ತು ಆಸ್ತಿ ತೆರಿಗೆಯಲ್ಲಿ ಏಕಸ್ವಾಮ್ಯತೆ ತರಬೇಕೆಂದೂ ಒತ್ತಾಯಿಸಿದ್ದಾರೆ. ಕೈಗಾರಿಕೆಗಳಿಗೆ ಭೂಮಿಯನ್ನು ಕೊಡುವಾಗ ಸಂಪೂರ್ಣ ಭೂಸ್ವಾಧೀನ ಮಾಡಿ ಎಂದು ಮನವಿ ಮಾಡಿದೆ.

ವೆಬ್ದುನಿಯಾವನ್ನು ಓದಿ