ಇಂಧನ ಪೂರೈಕೆ ಸ್ಥಗಿತ: ಸ್ಪೈಸ್ ಜೆಟ್ ಹಾರಾಟ ಸ್ಥಗಿತ

ಬುಧವಾರ, 17 ಡಿಸೆಂಬರ್ 2014 (10:52 IST)
ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಸ್ಪೈಸ್ ಜೆಟ್ ಹಾರಾಟಕ್ಕೆ ತೈಲ ಮಾರಾಟ ಕಂಪನಿಗಳು ಜೆಟ್ ಇಂಧನ ಪೂರೈಕೆ ನಿಲ್ಲಿಸಿದ್ದರಿಂದ ಸ್ಪೈಸ್ ಜೆಟ್ ಹಾರಾಟವನ್ನು ಸ್ಥಗಿತಗೊಳಿಸಿದೆ. ತೈಲ ಕಂಪನಿಗಳ ಜೊತೆ ಇಂಧನ ಪೂರೈಕೆ ವಿವಾದದಿಂದಾಗಿ ಬೆಳಿಗ್ಗೆಯಿಂದ ಒಂದೇ ಒಂದು ವಿಮಾನ ಹಾರಾಟ ಮಾಡಿಲ್ಲ ಎಂದು ಮೂಲಗಳು ಹೇಳಿವೆ.

2 ವಾರಗಳ ಸಾಲದ ಸೌಲಭ್ಯದ ಮೇಲೆ ಸ್ಪೈಸ್ ಜೆಟ್‌ಗೆ ಜೆಟ್ ಇಂಧನ ಪೂರೈಕೆ ಆರಂಭಿಸುವ ಬಗ್ಗೆ ತೈಲ ಕಂಪನಿಗಳು ಇನ್ನೂ ನಿರ್ಧಾರ ತೆಗೆದುಕೊಳ್ಳದಿರುವುದರಿಂದ ಸ್ಪೈಸ್ ಜೆಟ್ ಹಾರಾಟ ನಿಂತಿದೆ.

ಸ್ಪೈಸ್ ಜೆಟ್ ವಿಮಾನ ಸಂಸ್ಥೆಯನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಅದಕ್ಕೆ 15 ದಿನಗಳ ಸಾಲ ಸೌಲಭ್ಯ ನೀಡುವಂತೆ ನಾಗರಿಕ ವಿಮಾನಯಾನ ಸಚಿವಾಲಯ ಮನವಿ ಮಾಡುವುದಾಗಿ ತಿಳಿಸಿದೆ

ವೆಬ್ದುನಿಯಾವನ್ನು ಓದಿ