ಫ್ಲಿಪ್‌ಕಾರ್ಟ್ ,ಅಮೆಜಾನ್, ಸ್ನ್ಯಾಪ್‌ಡೀಲ್ ಗ್ರಾಹಕರಿಗೆ ಹೆಚ್ಚಿನ ರಿಯಾಯಿತಿ ನೀಡುವಂತಿಲ್ಲ

ಶನಿವಾರ, 2 ಏಪ್ರಿಲ್ 2016 (16:16 IST)
ನವದೆಹಲಿ: ಗ್ರಾಹಕರಿಗೆ ರಿಯಾಯಿತಿ ನೀಡುವ ಮೂಲಕವೇ ಆಕರ್ಷಿಸುತ್ತಿದ್ದು ದೈತ್ಯ ಆನ್‌ಲೈನ್ ಮಾರುಕಟ್ಟೆಯಾಗಿರುವ ಫ್ಲಿಪ್‌ಕಾರ್ಟ್, ಅಮೇಜಾನ್ ಮತ್ತು ಸ್ನಾಪ್‌ಡೀಲ್ ಸಂಸ್ಥೆಗಳು ಸರಕು ಮತ್ತು ಸೇವೆಗಳ ಮೇಲೆ ಹೆಚ್ಚು ರಿಯಾಯಿತಿ ನೀಡಿ ಗ್ರಾಹಕರನ್ನು ಆಕರ್ಷಿಸದಂತೆ ಸರಕಾರ ಅಧಿಸೂಚನೆಗಳು ಹೊರಡಿಸಿದೆ.
ಕೇಂದ್ರ ಸರಕಾರ, ಇ- ಮಾರುಕಟ್ಟೆಯಲ್ಲಿ 100 ಪ್ರತಿಶತದಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಿದ್ದು, ಸರಕು ಮತ್ತು ಸೇವೆಗಳ ಮೇಲೆ ರಿಯಾಯಿತು ನೀಡುವ ಮೂಲಕ ಮಾರುಕಟ್ಟೆಯಲ್ಲಿ ಪರಿಣಾಮ ಬೀರದಂತೆ ಆನ್‌ಲೈನ್ ಮಾರುಕಟ್ಟೆಗಳಿಗೆ ಸೂಚನೆ ನೀಡಲಾಗಿದೆ.
 
ದಾಸ್ತಾನು ಮಾಲೀಕರು ಅಥವಾ ಸೇವೆಗಳ ಪೂರೈಕೆದಾರರು ಮಾತ್ರ ರಿಯಾಯಿತಿ ನೀಡಬಹುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.
 
ಇ- ಕಾಮರ್ಸ್ ಮಾರ್ಗದರ್ಶಿ ದಾಸ್ತಾನು ಮಾಲೀಕರು ನೀಡುವ ರಿಯಾಯಿತಿಯನ್ನು ಮಾತ್ರ ಅನುಮತಿಸುತ್ತದೆ. ಉದಾಹರಣೆಗೆ, ಮಾರುಕಟ್ಟೆ ನೋಂದಾಯಿತ ಮಾರಾಟಗಾರರು, ರಿಯಾಯಿತಿ ಸೇರಿಸಿ ಬೆಲೆ ನಿರ್ಧರಿಸಲು ಅನುಮತಿಸುತ್ತದೆ ಎಂದು ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಜಂಟಿ ಕಾರ್ಯದರ್ಶಿ (ಡಿಐಪಿಪಿ) ಅತುಲ್ ಚತುರ್ವೇದಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
 
ಈ ಅಧಿಸೂಚನೆಗಳು ವಾಸ್ತವ ಮತ್ತು ಭೌತಿಕ ಮಳಿಗೆಗಳ ಸಾಮ್ಯತೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ