100 ಮಿಲಿಯನ್ ಗ್ರಾಹಕರನ್ನು ದಾಟಿದ ಫ್ಲಿಪ್‌ಕಾರ್ಟ್

ಬುಧವಾರ, 21 ಸೆಪ್ಟಂಬರ್ 2016 (14:50 IST)
ದೇಶದ ಆನ್‌ಲೈನ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಫ್ಲಿಪ್‌ಕಾರ್ಟ್, ಇದೀಗ 100 ಮಿಲಿಯನ್ ಗ್ರಾಹಕರ ಗಡಿದಾಟಿದ ಏಕೈಕ ವಾಣಿಜ್ಯ ಕಂಪೆನಿ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. 
 
ಬೆಂಗಳೂರು ಮೂಲದ ಕಂಪೆನಿ ಫ್ಲಿಪ್‌ಕಾರ್ಟ್, ಕಳೆದ ಒಂದು ವರ್ಷದ ಅವಧಿಯಲ್ಲಿ ಗ್ರಾಹಕರ ಸಂಖ್ಯೆಯನ್ನು ದ್ವಿಗುಣಗೊಳಿಸಿದ್ದು, ಕಳೆದ ಆರು ತಿಂಗಳ ಅವಧಿಯಲ್ಲಿ 25 ಮಿಲಿಯನ್ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.
 
ಉತ್ತಮ ಗುಣಮಟ್ಟದ ಸೇವೆ, ಅತ್ಯುತ್ತಮ ಉತ್ಪನ್ನಗಳು, ನಿಗದಿತ ಅವಧಿಯ ಡೆಲಿವರಿಯಿಂದಾಗಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಮುಂಬರುವ ದಿನಗಳಲ್ಲಿ ವಿಶ್ವದಲ್ಲಿಯೇ ಶ್ರೇಷ್ಠ ಆನ್‌ಲೈನ್ ಮಾರುಕಟ್ಟೆ ಎನ್ನುವ ಗುರಿ ಹೊಂದಲು ಪ್ರಯತ್ನಿಸಲಾಗುತ್ತಿದೆ ಎಂದು ಫ್ಲಿಪ್‌ಕಾರ್ಟ್ ಸಿಇಒ ಬಿನ್ನಿ ಬನ್ಸಾಲ್ ತಿಳಿಸಿದ್ದಾರೆ. 
 
ಫ್ಲಿಪ್‌ಕಾರ್ಟ್ ಕಂಪೆನಿಯಲ್ಲಿ ಡೈಗರ್ ಗ್ಲೋಬಲ್, ಎಸೆಲ್ ಪಾರ್ಟನರ್ಸ್, ಮೊರ್ಗಾನ್ ಸ್ಟಾನ್‌ಲೈ ಮತ್ತು ಟಿ.ರೋವೆಯಂತಹ ಹೂಡಿಕೆದಾರ ಕಂಪೆನಿಗಳಿವೆ. 3 ಬಿಲಿಯನ್ ಡಾಲರ್‌ಗಳಿಗೆ ಮೈಂತ್ರಾ, ಫೋನ್‌ಪೇ ಮತ್ತು ಲೆಟ್ಸ್‌ಬೈ ಕಂಪೆನಿಗಳನ್ನು ಖರೀದಿಸಲಾಗಿದೆ. ಕ್ಯೂಬ್ 26 ಮತ್ತು ನೆಸ್ಟ್‌ಅವೇ ಮತ್ತು ಬ್ಲಾಕ್ ಬಕ್ ಕಂಪೆನಿಗಳಲ್ಲಿ ಕೂಡಾ ಹೂಡಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 
 
ಬ್ಯಾಂಕ್‌ ಆಫ್ ಅಮೆರಿಕಾ ಮೆರಿಲ್ ಲಿಂಚ್ ವರದಿಯೊಂದನ್ನು ಬಿಡುಗಡೆಗೊಳಿಸಿದ್ದು, ಮಾರುಕಟ್ಟೆಯಲ್ಲಿ ಶೇ.43 ರಷ್ಟು ಪಾಲನ್ನು ಹೊಂದುವುದರೊಂದಿಗೆ ಆನ್‌ಲೈನ್ ಮಾರುಕಟ್ಟೆಯಲ್ಲಿ ಫ್ಲಿಪ್‌ಕಾರ್ಟ್ ನಾಯಕನಾಗಿ ಹೊರಹೊಮ್ಮಿದೆ ಎಂದು ಪ್ರಕಟಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ