ಫ್ಲಿಪ್‌ಕಾರ್ಟ್ ಗ್ರಾಹಕರಿಗೆ 24 ಗಂಟೆಗಳಲ್ಲಿ ರೀಫಂಡ್

ಮಂಗಳವಾರ, 1 ಸೆಪ್ಟಂಬರ್ 2015 (20:51 IST)
ಇ-ವಾಣಿಜ್ಯ ದೈತ್ಯ ಫ್ಲಿಪ್‌ಕಾರ್ಟ್ ಸೋಮವಾರ ಇನ್‌ಸ್ಟಂಟ್  ರೀಫಂಡ್ ವ್ಯವಸ್ಥೆಗೆ  ಚಾಲನೆ ನೀಡಿದೆ. ಗ್ರಾಹಕರು ಉತ್ಪನ್ನವನ್ನು ವಾಪಸ್ ಮಾಡಿದ 24 ಗಂಟೆಯೊಳದೆ ರೀಫಂಡ್ ಮಾಡುವುದಕ್ಕೆ ಇದು ನೆರವಾಗುತ್ತದೆ.

 ಇದಕ್ಕಿಂತ ಮುಂಚೆ ಹಣ ಮರುಪಾವತಿ ಪ್ರಕ್ರಿಯೆಗೆ ಮೂರಿಂದ ಐದು ಕೆಲಸದ ದಿನಗಳು ಬೇಕಾಗಿತ್ತು. ಈ ನಾವೀನ್ಯದ ಪ್ರಯಾಣವನ್ನು ಮುಂದುವರಿಸಿದ ಫ್ಲಿಪ್‌ಕಾರ್ಟ್, ಡೆಲಿವರಿ‌ಗೆ ನಗದು ಆರ್ಡರ್‌ಗಳಿಗೆ ಹಣಮರುಪಾವತಿಯನ್ನು ಫ್ಲಿಪ್‌ಕಾರ್ಟ್ ಕೇಂದ್ರಕ್ಕೆ ಉತ್ಪನ್ನ ಮುಟ್ಟಿದ ಕೂಡಲೇ ಮಾಡಲಾಗುತ್ತದೆ. 
 
ತಕ್ಷಣ ಪಾವತಿ ವ್ಯವಸ್ಥೆ ವರ್ಗಾವಣೆ ಬಳಸಿಕೊಂಡು ಇನ್‌ಸ್ಟಂಟ್ ರೀಫಂಡ್ ಪೂರ್ಣಗೊಳಿಸಲಾಗುತ್ತದೆ. ಐಎಂಪಿಎಸ್ ವಹಿವಾಟು ಸಾಮರ್ಥ್ಯ ಹೊಂದಿರುವ ಬ್ಯಾಂಕ್‌ಗಳಿಗೆ ಸಿಒಡಿ ಐಎಂಪಿಎಸ್ ವಾಪಸು ಸೌಲಭ್ಯವು ಸಕ್ರಿಯವಾಗಿರುತ್ತದೆ ಎಂದು  ಹೇಳಿದೆ. ಅರ್ಹ ಗ್ರಾಹಕರಿಗೆ ಅವರ ರೀಫಂಡ್ ಸ್ಥಿತಿಗತಿ  ಬಗ್ಗೆ ಎಸ್‌ಎಂಎಸ್ ಮೂಲಕ ಮಾಹಿತಿ ನೀಡಲಾಗುತ್ತದೆ ಎಂದು ಅದು ಹೇಳಿದೆ. 
 
 

ವೆಬ್ದುನಿಯಾವನ್ನು ಓದಿ