ಬುಕ್ ಮಾಡಿದ್ದು ಸ್ಮಾರ್ಟ್‌ಫೋನ್, ಸ್ವೀಕರಿಸಿದ್ದು ಎರಡು ಮಾವಿನ ಹಣ್ಣುಗಳು

ಶನಿವಾರ, 13 ಜೂನ್ 2015 (14:03 IST)
ತೆಲಂಗಾಣದ ವ್ಯಕ್ತಿಯೊಬ್ಬನಿಗೆ ಜನಪ್ರಿಯ ಇ-ವಾಣಿಜ್ಯ ತಾಣ ಫ್ಲಿಪ್‌ಕಾರ್ಟ್‌ನಿಂದ ಮಾವಿನ ಹಣ್ಣಿನ ಪೆಟ್ಟಿಗೆಯೊಂದು ರವಾನೆಯಾದಾಗ ಅಚ್ಚರಿಗೊಂಡರು. ವಾಸ್ತವವಾಗಿ ಅವರು ಸ್ಮಾರ್ಟ್‌ಫೋನ್‌ಗೆ ಆರ್ಡರ್ ಕೊಟ್ಟಿದ್ದರೂ ಮಾವಿನ ಹಣ್ಣುಗಳನ್ನು ಡೆಲಿವರಿ ಮಾಡಲಾಗಿತ್ತು.  ತಾವು ಕೊರಿಯರ್ ಡೆಲಿವರಿ ಕಂಪನಿ ಫೆಡ್‌ಎಕ್ಸ್‌ನಿಂದ ಇದನ್ನು ಸ್ವೀಕರಿಸಿದ್ದಾಗಿ ಚಿಲುವೇರಿ ಸ್ರುಚರಣ್ ಹೇಳಿದ್ದಾರೆ.  ಫ್ಲಿಪ್‌ಕಾರ್ಟ್‌ನಲ್ಲಿ ಆರ್ಡರ್ ಮಾಡುವಾಗ ತಾವು ಕ್ರೆಡಿಟ್ ಕಾರ್ಡ್ ಬಳಸಿದ್ದಾಗಿ ಅವರು ಹೇಳಿದರು. ಪ್ರಸಕ್ತ ಅವರು ಕಂಪನಿಯಿಂದ ರೀಫಂಡ್ ಪಡೆಯುವ ಪ್ರಕ್ರಿಯೆಯಲ್ಲಿದ್ದಾರೆ.
 
ನಿಜವಾಗಲೂ ಆಗಿದ್ದೇನು?
ಸ್ರುಚರಣ್ ಮೇ 26ರಂದು ಫ್ಲಿಪ್‌ಕಾರ್ಡ್ ಮೆಗಾ ಸೇಲ್‌ನಲ್ಲಿ 8,099 ರೂ. ದರ ಆಸಸ್ ಫೋನ್ ಜೆನ್‌ಫೋನ್ 5ಕ್ಕೆ ಆರ್ಡರ್ ಮಾಡಿದ್ದರು.  ಬಳಿಕ ಅವರು ಫೋನ್ ಬದಲಿಗೆ ಮಾವಿನಹಣ್ಣುಗಳನ್ನು ಸ್ವೀಕರಿಸಿದಾಗ, ಅವರು ರೀಫಂಡ್‌ಗಾಗಿ ಕೇಳಿದ್ದು, ಕಂಪನಿ ಅವರಿಗೆ ರೀಫಂಡ್ ಭರವಸೆ ನೀಡಿದೆ.
 
ಸ್ರುಚರಣ್  ಪೋಸ್ಟ್‌ನಲ್ಲಿ ಹೀಗೆ ಬರೆದಿದೆ:  ನಾನು ಮೇ 26ರಂದು ಫ್ಲಿಪ್‌ಕಾರ್ಟ್‌ನಲ್ಲಿ ಮೊಬೈಲ್ ಬುಕ್ ಮಾಡಿದ್ದೆ. ಆದರೆ ಕೊರಿಯರ್‌ನಲ್ಲಿ ಎರಡು ಮಾವಿನ ಹಣ್ಣುಗಳು ಬಂದಿವೆ. ಆದ್ದರಿಂದ ಆನ್ ಲೈನ್ ಶಾಪಿಂಗ್ ಕುರಿತು ಎಚ್ಚರವಾಗಿರಿ ಎಂದು ಹೇಳಿದ್ದರು. 

ವೆಬ್ದುನಿಯಾವನ್ನು ಓದಿ