ಫೋರ್ಬ್ಲ್ ಪಟ್ಟಿಯಲ್ಲಿ ಫ್ಲಿಪ್‌ಕಾರ್ಟ್ ಬಿನ್ನಿ ಬನ್ಸಾಲ್ ಅತೀ ಕಿರಿಯ ಬಿಲಿಯಾಧಿಪತಿ

ಗುರುವಾರ, 24 ಸೆಪ್ಟಂಬರ್ 2015 (18:13 IST)
ಫ್ಲಿಪ್‌ಕಾರ್ಟ್ ಸಹಸಂಸ್ಥಾಪಕರಾದ ಸಚಿನ್ ಮತ್ತು ಬಿನ್ನಿ ಬನ್ಸಾಲ್ ಅವರು ಪ್ರತಿಷ್ಠಿತ ಅತೀ ಶ್ರೀಮಂತ ಭಾರತೀಯ ಬಿಲಿಯಾಧಿಪತಿಗಳ ಪೋರ್ಬ್ಸ್ ಪಟ್ಟಿಯಲ್ಲಿ ಮೊದಲ ಬಾರಿ ಸ್ಥಾನ ಪಡೆದಿದ್ದಾರೆ. 2007ರಲ್ಲಿ ಫ್ಲಿಪ್‌ಕಾರ್ಟ್ ಸ್ಥಾಪನೆ ಮಾಡಿದ ಬನ್ಸಾಲ್‌‌ದ್ವಯರು ತಲಾ 1.3 ಶತಕೋಟಿ ಡಾಲರ್ ಮೌಲ್ಯದೊಂದಿಗೆ 86 ನೇ ಸ್ಥಾನದಲ್ಲಿದ್ದಾರೆ ಎಂದು ಪೋರ್ಬ್ಸ್ ತಿಳಿಸಿದೆ. 
 
ಫ್ಲಿಪ್‌ಕಾರ್ಟ್ ಬಿನ್ನಿ ಬನ್ಸಾಲ್ ಅವರು ಪಟ್ಟಿಯಲ್ಲಿ 32 ವರ್ಷಗಳ ವಯಸ್ಸಿನೊಂದಿಗೆ ಅತೀ ಕಿರಿಯ ವಯಸ್ಕರಾಗಿದ್ದಾರೆ. ಪಟ್ಟಿಯಲ್ಲಿ ಫ್ಲಿಪ್‌ಕಾರ್ಟ್ ಸಂಸ್ಥಾಪಕರು ಸೇರಿದಂತೆ 12 ಮಂದಿ ಹೊಸಬರು ಸೇರಿದ್ದು, ಕಡಿಮೆ ಪ್ರಯಾಣವೆಚ್ಚದ ಏರ್‌ಲೈನ್ ಇಂಡಿಗೊ ಸಹಸಂಸ್ಥಾಪಕ ರಾಕೇಶ್ ಗಾಂಗ್‌ವಾಲ್ ಪಟ್ಟಿಯಲ್ಲಿ 70 ನೇ ಸ್ಥಾನದಲ್ಲಿದ್ದು, 1.6 ಶತಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಗಂಗಾವಾಲ್ ಪಾಲುದಾರ ರಾಹುಲ್ ಭಾಟಿಯಾ 12 ಸ್ಥಾನಗಳನ್ನು ಏರಿದ್ದು, ಫೋರ್ಬ್ಸ್ ಪಟ್ಟಿಯಲ್ಲಿ 2.4 ಶತಕೋಟಿ ಡಾಲರ್‌ ಮೌಲ್ಯದೊಂದಿಗೆ 38ನೇ ಸ್ಥಾನದಲ್ಲಿದ್ದಾರೆ. 
 
ಏತನ್ಮಧ್ಯೆ ರಿಲಯನ್ಸ್ ಉದ್ಯಮದ ಅಧ್ಯಕ್ಷ ಮುಕೇಶ್ ಅಂಬಾನಿ ಸತತ 9 ನೇ ವರ್ಷದಲ್ಲಿ 18.9 ಶತಕೋಟಿ ಡಾಲರ್ ನಿವ್ವಳ ಆಸ್ತಿಯೊಂದಿಗೆ ಅತೀ ಶ್ರೀಮಂತ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂಬಾನಿ ಸಂಪತ್ತು ವರ್ಷದಲ್ಲಿ 4.7 ಶತಕೋಟಿ ಡಾಲರ್ ಕುಸಿದಿದೆ. 
 
ಸನ್ ಫಾರ್ಮಾದ ದಿಲೀಪ್ ಶಾಂಘ್ವಿ 18 ಶತಕೋಟಿ ಡಾಲರ್ ಮೌಲ್ಯದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಐಟಿ ಉದ್ಯಮ ಸಂಸ್ಥೆ ವಿಪ್ರೋದ ಅಜೀಂ ಪ್ರೇಮ್‌ಜಿ 15.9 ಶತಕೋಟಿ ಡಾಲರ್ ಆಸ್ತಿ ಮೌಲ್ಯಯೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. 

ವೆಬ್ದುನಿಯಾವನ್ನು ಓದಿ