20 ಸ್ವಯಂ ಪಿಕ್‌ಅಪ್ ಅಂಗಡಿಗಳಿಗೆ ಫ್ಲಿಪ್‌ಕಾರ್ಟ್ ಚಾಲನೆ

ಮಂಗಳವಾರ, 28 ಜುಲೈ 2015 (16:35 IST)
ಭಾರತದ ಅತೀ ದೊಡ್ಡ ಈ-ವಾಣಿಜ್ಯ ಸಂಸ್ಥೆ ಫ್ಲಿಪ್‌ಕಾರ್ಡ್ ದೇಶಾದ್ಯಂತ 20 ಮಳಿಗೆಗಳ ಆರಂಭವನ್ನು ಪ್ರಕಟಿಸಿದ್ದು, ಅಲ್ಲಿ ಗ್ರಾಹಕರು ತಮಗೆ ಅನುಕೂಲವಾದ ವೇಳೆಯಲ್ಲಿ ಕಳಿಸಲಾದ ವಸ್ತುವನ್ನು ಸಂಗ್ರಹಿಸಬಹುದು.  ಹೊಸ ಪರ್ಯಾಯ ಡೆಲಿವರಿ ಮಾದರಿಯು ತಮ್ಮ ಸಮೀಪದ ಕೇಂದ್ರಕ್ಕೆ ಹೋಗಿ ರವಾನೆಯಾದ ವಸ್ತುವನ್ನು ಅನುಕೂಲಕರ ವೇಳೆಯಲ್ಲಿ ಸ್ವೀಕರಿಸಬಹುದು ಎಂದು ಫ್ಲಿಪ್‌ಕಾರ್ಟ್ ಹೇಳಿಕೆಯಲ್ಲಿ ತಿಳಿಸಿದೆ. 
 
ಸರಬರಾಜಿನ ಸಂದರ್ಭದಲ್ಲಿ ಗ್ರಾಹಕರ ಅನುಪಸ್ಥಿತಿ ಮತ್ತು ಡೆಲಿವರಿ ಹುಡುಗರಿಗೆ ಐಟಿ ಪಾರ್ಕ್, ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ನಿಷಿದ್ಧದಿಂದಾಗಿ ಡೆಲಿವರಿ ಪ್ರಕ್ರಿಯೆ ಕುರಿತು ಗ್ರಾಹಕರ ಅತೃಪ್ತಿ ಮುಂತಾದವು ಇದಕ್ಕೆ ಕಾರಣ ಎಂದು ಫ್ಲಿಪ್ ಕಾರ್ಟ್ ತಿಳಿಸಿದೆ
 
ಈ ಮಾದರಿಯ ಸೇವೆಯು ಗ್ರಾಹಕ ಅಲಭ್ಯತೆ ವಿಷಯಗಳಿಗೆ ಪರಿಹಾರವಾಗಿದ್ದು, ತಮ್ಮ ಅನುಕೂಲಕ್ಕೆ ತಕ್ಕಂತೆ ಡೆಲಿವರಿ ವೇಳೆ ಮತ್ತು ಸ್ಥಳವನ್ನು ನಿರ್ಧರಿಸುವ ಆಯ್ಕೆ ಗ್ರಾಹಕರಿಗೆ ಬಿಡಲಾಗುತ್ತದೆ. 
 
ಈ ಫ್ಲಿಪ್‌ಕಾರ್ಟ್ ಸ್ಟೋರ್‌ಗಳನ್ನು ಪ್ರಸಕ್ತ ಬೆಂಗಳೂರು, ಮೈಸೂರು, ಅಹ್ಮದಾಬಾದ್, ದೆಹಲಿ, ಕೊಲ್ಕತಾ, ಪುಣೆ, ವೆಲ್ಲೂರು, ಗುರಗಾಂವ್, ವಡೋದರಾ ಮತ್ತು ಸೂರತ್‌ನಲ್ಲಿ  ಪ್ರಸಕ್ತ ಕಾರ್ಯನಿರ್ವಹಿಸುತ್ತಿವೆ. 

ವೆಬ್ದುನಿಯಾವನ್ನು ಓದಿ