FreeCharge ಇ-ವ್ಯಾಲೆಟ್‌ಗೆ ವಿಮಾ ಸೌಲಭ್ಯ

ಬುಧವಾರ, 21 ಡಿಸೆಂಬರ್ 2016 (09:22 IST)
ತನ್ನ ಗ್ರಾಹಕರಿಗೆ ಮತ್ತಷ್ಟು ಭದ್ರತೆ ನೀಡಲು ಡಿಜಿಟಲ್ ಪೇಮೆಂಟ್ ಕಂಪನಿ ಫ್ರೀಚಾರ್ಜ್ ಹೊಸ ಯೋಜನೆಯೊಂದನ್ನು ರೂಪಿಸಿದೆ. ಫ್ರೀಚಾರ್ಜ್ ಇ-ವ್ಯಾಲೆಟ್ ಬ್ಯಾಲೆನ್ಸ್ ಮೇಲೆ ರೂ.20,000ದವರೆಗೂ ಉಚಿತ ವಿಮಾ ಸೌಲಭ್ಯ ಕಲ್ಪಿಸುತ್ತಿರುವುದಾಗಿ ಕಂಪನಿ ತಿಳಿಸಿದೆ.
 
ಮೊಬೈಲ್ ಫೋನ್‍ಗಳು ಕಳ್ಳತನಕ್ಕೆ ಗುರಿಯಾದಾಗ ಇಲ್ಲಾ ಕಳೆದುಹೋದಾಗ ಈ ವಿಮಾ ಸೌಲಭ್ಯ ಗ್ರಾಹಕರಿಗೆ ಅನ್ವಯವಾಗಲಿದೆ ಎಂದು ಕಂಪನಿ ಹೇಳಿದೆ. ರಿಲಯನ್ಸ್ ಜನರಲ್ ಕಂಪನಿಯೊಂದಿಗಿನ ಸಹಯೋಗದೊಂದಿಗೆ ವ್ಯಾಲೆಟ್ ಬ್ಯಾಲೆನ್ಸ್ ಮೇಲೆ ಈ ವಿಮೆ ಕೊಡಲಿದ್ದಾರೆ.
 
ಇ-ವ್ಯಾಲೆಟ್ ಭದ್ರತೆಗೆ ಸಂಬಂಧಿಸಿದಂತೆ ನಾವು ತೆಗೆದುಕೊಂಡ ಮತ್ತೊಂದು ಗಮನಾರ್ಹ ನಿರ್ಣಯ ಇದು ಎಂದಿದೆ ಕಂಪನಿ. ಈ ಯೋಜನೆ ಪ್ರಕಾರ ರೂ.20,000 ವಿಮಾ ಸೌಲಭ್ಯ ಸಿಗಲಿದ್ದು, ಗ್ರಾಹಕರು ತಿಂಗಳಲ್ಲಿ ಒಮ್ಮೆಯಾದರೂ ಫ್ರೀಚಾರ್ಜ್ ಬಳಸಿ ವಹಿವಾಟು ನಡೆಸಿರಬೇಕು. 
 
ವಿಮಾ ಪಡೆಯಬೇಕಾದರೆ ಗ್ರಾಹಕರು ತಮ್ಮ ಫೋನ್ ಕಳೆದುಹೋದ ಅಥವಾ ಕಳ್ಳತನಕ್ಕೆ ಗುರಿಯಾದ 24 ಗಂಟೆಗಳಲ್ಲಿ ಪೊಲೀಸರಿಗೆ ದೂರು ಕೊಡಬೇಕು. ಎಫ್‍ಐಆರ್ ಪತ್ರದೊಂದಿಗೆ ಕಸ್ಟಮರ್ ಕೇರ್ ಮೂಲಕ ಅಥವಾ ಇ-ಮೇಲ್ ಮೂಲಕ ಫ್ರೀಚಾರ್ಜ್ ಕಂಪನಿಗೆ ಕೂಡಲೆ ತಿಳಿಸಬೇಕಾಗಿರುತ್ತದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ