ರಿಂಗಿಂಗ್ ಬೆಲ್ಸ್ ವಿರುದ್ಧ ಗ್ರಾಹಕ ಸೇವೆ ಕಂಪನಿಯಿಂದ ವಂಚನೆ ಆರೋಪ

ಶುಕ್ರವಾರ, 26 ಫೆಬ್ರವರಿ 2016 (17:36 IST)
ಫ್ರೀಡಂ 251 ಫೋನ್ ಇನ್ನೊಂದು ವಿವಾದಾತ್ಮಕ ವಿಷಯದಲ್ಲಿ ಸಿಕ್ಕಿಬಿದ್ದಿದ್ದು, ರಿಂಗಿಂಗ್ ಬೆಲ್ಸ್ ಅದರ ಗ್ರಾಹಕ ಸೇವಾ ಪೂರೈಕೆದಾರನಿಗೆ ಬಾಕಿ ಹಣ ಪಾವತಿಸದೇ ವಂಚಿಸಿದೆ ಎಂದು ದೂರಿದೆ. ಆದರೆ ಗ್ರಾಹಕ ಸೇವೆಯ ಬಿಪಿಒ ಕಂಪನಿ ಸೈಫ್ಯೂಚರ್‌ ಗ್ರಾಹಕ ಕರೆಗಳ ದಟ್ಟಣೆಯನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂದು ರಿಂಗಿಂಗ್ ಬೆಲ್ಸ್ ದೂರಿದೆ.

 ಸೈಫ್ಯೂಚರ್ ಸಂಸ್ಥಾಪಕ ಮತ್ತು ಸಿಇಒ ಅನುಜ್ ಬೈರತಿ ಈ ಕುರಿತು, ರಿಂಗಿಂಗ್ ಬೆಲ್ಸ್ ಮತ್ತು ಅದರ ವ್ಯವಹಾರ ಮಾದರಿ ಕುರಿತು ನಾವು ಸದಾ ಸಂದೇಹಗೊಂಡಿದ್ದೆವು.  ಅವರ ಆಡಳಿತ ಮಂಡಳಿಯೊಂದಿಗೆ ಹಲವು ಸುತ್ತುಗಳ ಚರ್ಚೆ ಬಳಿಕ , ಅವರ ಯೋಜನೆಯನ್ನು ಕೈಗೆತ್ತಿಕೊಂಡೆವು ಎಂದು ಹೇಳಿದ್ದಾರೆ. 
ಫೋನ್ ಬಿಡುಗಡೆಯಾದ ಕೆಲವು ದಿನಗಳಲ್ಲೇ ಕಾಲ್ ಸೆಂಟರ್ ಲಕ್ಷಾಂತರ ಕರೆಗಳನ್ನು ಸ್ವೀಕರಿಸಿ ಅದಕ್ಕೆ ಸೂಕ್ತವಾಗಿ ಉತ್ತರಿಸಿದೆ. ರಿಂಗಿಂಗ್ ಬೆಲ್ಸ್ ಕೂಡ ನಮ್ಮ ಸೇವೆಯನ್ನು ಮೆಚ್ಚಿಕೊಂಡಿತ್ತು ಎಂದು ಅವರು ಹೇಳಿದರು
 ಆದರೆ ನಾವು ವಾರದ ಆಧಾರದ ಮೇಲೆ ನೀಡಬೇಕಾಗಿದ್ದ ಪೇಮೆಂಟ್ ಕೇಳಿದಾಗ ನಮ್ಮ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ಅತೃಪ್ತಿಯ ಸೇವೆಯ ಉದಾಹರಣೆ ನೀಡಿ ನಮ್ಮ ಸೇವೆಯನ್ನು ರದ್ದು ಮಾಡಿದೆ ಎಂದು ಆರೋಪಿಸಿದರು. 
 

ವೆಬ್ದುನಿಯಾವನ್ನು ಓದಿ