ಚಿನ್ನದ ದರದಲ್ಲಿ ಅಲ್ಪ ಪ್ರಮಾಣದ ಕುಸಿತ

ಗುರುವಾರ, 1 ಸೆಪ್ಟಂಬರ್ 2016 (17:56 IST)
ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟು ಹಾಗೂ ದೇಶೀಯ ಮಾರುಕಟ್ಟೆಯಲ್ಲಿ ಆಭರಣ ಬೇಡಿಕೆಯಲ್ಲಿ ಕುಸಿತ ಕಂಡು ಪರಿಣಾಮವಾಗಿ ಚಿನ್ನದ ದರದಲ್ಲಿ 60 ರೂಪಾಯಿ ಕುಸಿತ ಕಂಡು 10 ಗ್ರಾಂ ಚಿನ್ನದ ದರ 31,050 ರೂಪಾಯಿಗಳಿಗೆ ತಲುಪಿದೆ. 
 
ಆದರೆ, ಕೈಗಾರಿಕಾ ಘಟಕಗಳ ಸೀಮಿತ ವ್ಯವಹಾರದ ಹಿನ್ನೆಲೆಯಲ್ಲಿ ಬೆಳ್ಳಿ ದರ ಸ್ಥಿರವಾಗಿದ್ದು, ಪ್ರತಿ ಕೆ.ಜಿ ಬೆಳ್ಳಿಯ ದರ 44,800 ರೂಪಾಯಿಗಳಿಗೆ ತಲುಪಿದೆ. 
 
ಸಾಗರೋತ್ತರ ಮಾರುಕಟ್ಟೆಗಳ ದುರ್ಬಲ ವಹಿವಾಟು ಹೊರತುಪಡಿಸಿ, ದೇಶಿಯ ಮಾರುಕಟ್ಟೆಯಲ್ಲಿ ಚಿನ್ನಾಭರಣ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಚಿನ್ನದ ದರ ಕಡಿಮೆಯಾಗಿದೆ ಎಂದು ಮಾರುಕಟ್ಟೆ ವರ್ತಕರು ತಿಳಿಸಿದ್ದಾರೆ.
 
ಜಾಗತಿಕ ಮಾರುಕಟ್ಟೆಗಳ ವಹಿವಾಟಿನಲ್ಲಿ ಚಿನ್ನದ ದರ ಕುಸಿದ ಪರಿಣಾಮ, ಅಮೆರಿಕಾ ಮಾರುಕಟ್ಟೆಯಲ್ಲಿ ಚಿನ್ನದ ದರ 0.96 ಪ್ರತಿಶತ ಕುಸಿತ ಕಂಡು 10 ಔನ್ಸ್ ಚಿನ್ನದ ಬೆಲೆ 1,310.50 ಡಾಲರ್‌‌ಗಳಿಗೆ ತಲುಪಿದೆ.
 
99.9 ಹಾಗೂ 99.5 ಪ್ರತಿಶತ ಶುದ್ಧ ಚಿನ್ನದ ದರದಲ್ಲಿ 60 ರೂಪಾಯಿ ಕಡಿತಗೊಂಡು ಪ್ರತಿ ಹತ್ತು ಗ್ರಾಮ ಚಿನ್ನದ ಬೆಲೆ ಕ್ರಮವಾಗಿ 31,050 ಮತ್ತು 30,900 ರೂಪಾಯಿಗಳಿಗೆ ತಲುಪಿದೆ.
 
ಆದಾಗ್ಯೂ, 8 ಗ್ರಾಂ ಚಿನ್ನದ ನಾಣ್ಯಗಳ ಬೆಲೆ 24,300 ರೂಪಾಯಿಗಳಿಗೆ ತಲುಪಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ