160 ರೂ. ಕುಸಿದ ಚಿನ್ನದ ಧಾರಣೆ: ಪ್ರತಿ 10 ಗ್ರಾಂ.ಗೆ 27,030

ಶನಿವಾರ, 2 ಮೇ 2015 (16:32 IST)
ಚಿನಿವಾರ ಪೇಟೆಯಲ್ಲಿ ಚಿನ್ನದ ಧಾರಣೆ ಸತತವಾಗಿ ಎರಡನೇ ದಿನ ಕುಸಿದಿದೆ. 160 ರೂ. ಕುಸಿದ ಚಿನ್ನ ಪ್ರತಿ ಹತ್ತು ಗ್ರಾಂ.ಗೆ 27, 030ಕ್ಕೆ ತಲುಪಿದೆ.  ಫೆಡರಲ್ ರಿಸರ್ವ್  ಅಮೆರಿಕದ ಬಡ್ಡಿದರ  ಏರಿಕೆಗೆ ಸಮೀಪಿಸುತ್ತಿದೆ ಎಂಬ ಊಹಾಪೋಹ ಹೆಚ್ಚಿದ ಕಾರಣ ಚಿನ್ನದ ದರಗಳ ಮೇಲೆ ಒತ್ತಡ ಏರಿ ಚಿನ್ನ 6 ವಾರಗಳಲ್ಲೇ ಅತಿ ಕಡಿಮೆ ದರಕ್ಕೆ ಕುಸಿದಿತ್ತು.

ಕೈಗಾರಿಕೆ ಘಟಕಗಳ ಖರೀದಿಯಲ್ಲಿ ಚೇತರಿಕೆ ಕಂಡಿದ್ದರಿಂದ ಬೆಳ್ಳಿಯು ಪುಟಿದೆದ್ದು, 510 ರೂ. ಏರಿಕೆಯಾಗಿ ಪ್ರತಿ ಕೆಜಿಗೆ 37,210 ರೂ.ಗೆ ತಲುಪಿದೆ.

ರಾಷ್ಟ್ರ ರಾಜಧಾನಿಯಲ್ಲಿ ಶೇ. 99.9 ಮತ್ತು ಶೇ. 99.5 ಶುದ್ಧತೆಯ ಚಿನ್ನದ ಧಾರಣೆ  160 ರೂ. ಕುಸಿದು  ಪ್ರತಿ ಹತ್ತು ಗ್ರಾಂ.ಗೆ 27,030 ಮತ್ತು 26,880ಗೆ ತಲುಪಿದೆ. ಶುಕ್ರವಾರ 285 ರೂ. ಕುಸಿತ ಅನುಭವಿಸಿತ್ತು.
 
 

ವೆಬ್ದುನಿಯಾವನ್ನು ಓದಿ