330 ರೂ. ಕುಸಿದ ಚಿನ್ನ: ಪ್ರತಿ ಹತ್ತು ಗ್ರಾಂ.ಗೆ 27,030 ರೂ.

ಬುಧವಾರ, 26 ಆಗಸ್ಟ್ 2015 (20:28 IST)
ಆಭರಣ ವ್ಯಾಪಾರಿಗಳಿಂದ ಬೇಡಿಕೆ ಕುಸಿತ ಮತ್ತು ಜಾಗತಿಕ ಪ್ರವೃತ್ತಿ ದುರ್ಬಲತೆಯಿಂದ ಚಿನಿವಾರ ಪೇಟೆಯಲ್ಲಿ ಚಿನ್ನದ ಧಾರಣೆ 330 ರೂ. ಕುಸಿದು ಪ್ರತೀ 10 ಗ್ರಾಂ.ಗೆ  27, 030 ರೂ.ಗೆ ಮುಟ್ಟಿದೆ. ಬೆಳ್ಳಿಯು 35,000 ಮಟ್ಟಕ್ಕಿಂತ ಕೆಳಗೆ ಕುಸಿದು ಇನ್ನೂ 530 ರೂ. ಕಳೆದುಕೊಂಡು ಪ್ರತಿ ಕೆಜಿಗೆ 34, 970 ರೂ. ತಲುಪಿದೆ. ಕೈಗಾರಿಕೆ ಘಟಕಗಳು ಮತ್ತು ನಾಣ್ಯ ತಯಾರಕರ ಬೇಡಿಕೆ ಕುಸಿತದಿಂದ ಈ ಬೆಳವಣಿಗೆ ಉಂಟಾಗಿದೆ. 
 
ದುರ್ಬಲ ಜಾಗತಿಕ ಪ್ರವೃತ್ತಿಗೆ ಅನುಗುಣವಾಗಿ ಆಭರಣ ಮಾರಾಟಗಾರರ ಖರೀದಿ ಚಟುವಟಿಕೆ ಕುಸಿತದಿಂದ ಚಿನ್ನದ ದರದಲ್ಲಿ ಕುಸಿತ ಉಂಟಾಯಿತು. ರಾಷ್ಟ್ರ ರಾಜಧಾನಿಯಲ್ಲಿ 99.9 ಮತ್ತು 99. 5 ಶುದ್ಧತೆಯ ಚಿನ್ನ 330 ರೂ. ಕುಸಿದು ಪ್ರತಿ 10 ಗ್ರಾಂಗೆ  27, 030 ಮತ್ತು 26, 880 ರೂ.ಗೆ ಮುಟ್ಟಿತು. ಮಂಗಳವಾರ ಚಿನ್ನದ ದರ 215 ರೂ. ಕಳೆದುಕೊಂಡಿತ್ತು. 
 
ಚಿನ್ನದ ನಾಣ್ಯ ಕೂಡ 100 ರೂ. ಕುಸಿದು 8 ಗ್ರಾಂ.ಗೆ 22, 600 ರೂ.ಗೆ ತಲುಪಿದೆ. ಇದೇ ರೀತಿ, ಬೆಳ್ಳಿಯು 530 ರೂ. ಕುಸಿತು ಅನುಭವಿಸಿ ಪ್ರತಿ ಕೆಜಿಗೆ 34, 970 ರೂಗೆ ತಲುಪಿದೆ. 
 

ವೆಬ್ದುನಿಯಾವನ್ನು ಓದಿ