ಚಿನ್ನದ ಅಮದು ವಹಿವಾಟಿನಲ್ಲಿ ಶೇ.8 ರಷ್ಟು ಕುಸಿತ

ಮಂಗಳವಾರ, 26 ಏಪ್ರಿಲ್ 2016 (20:40 IST)
ಜಾಗತಿಕ ಮತ್ತು ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಏರಿಳಿತವಾದ ಪರಿಣಾಮ ಚಿನ್ನದ ಆಮದು ವಹಿವಾಟಿನಲ್ಲಿ ಕುಸಿತ ಕಂಡಿದೆ ಎಂದು ಮೂಲಗಳು ತಿಳಿಸಿವೆ.
ಜಾಗತಿಕ ಮಾರುಕಟ್ಟೆಯಲ್ಲಿ ದುರ್ಬಲಗೊಂಡ ಚಿನ್ನದ ದರ ಮತ್ತು ದೇಶದ ವಿತ್ತಿಯ ಕೊರತೆ ಹಿನ್ನೆಲೆಯಲ್ಲಿ 2015-16 ರ ಆರ್ಥಿಕ ವರ್ಷದಲ್ಲಿ ಚಿನ್ನದ ಆಮದು ವಹಿವಾಟು 8 ಪ್ರತಿಶತ ಇಳಿಕೆ ಕಂಡು 31.72 ಬಿಲಿಯನ್ ಡಾಲರ್‌ಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.
 
2014-15 ರ ಆರ್ಥಿಕ ವರ್ಷದಲ್ಲಿ 34.38 ಬಿಲಿಯನ್ ಡಾಲರ್ ಚಿನ್ನವನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. 
 
ಕಳೆದ ಆರ್ಥಿಕ ವರ್ಷದ ಮಾರ್ಚ್‌ ತಿಂಗಳಿಗೆ ಹೋಲಿಸಿದರೆ ಪ್ರಸಕ್ತ ಆರ್ಥಿಕ ವರ್ಷದ ಮಾರ್ಚ್‌ ತಿಂಗಳಲ್ಲಿ ಚಿನ್ನದ ಆಮದು ವಹಿವಾಟಿನಲ್ಲಿ 80.48 ಪ್ರತಿಶತ ಕುಸಿತ ಕಂಡು 972.96 ಮಿಲಿಯನ್ ತಲುಪಿದೆ.
 
2014-15 ರ ಆರ್ಥಿಕ ವರ್ಷಕ್ಕೆ ಹೊಲಿಸಿದರೆ, 2015-16 ರ ಆರ್ಥಿಕ ವರ್ಷದಲ್ಲಿ ವಿತ್ತಿಯ ಕೊರತೆಯಿಂದ ಭಾರತದ ಜಿಡಿಪಿ ಬೆಳವಣಿಗೆ ದರದಲ್ಲಿ 1.5 ಪ್ರತಿಶತ ಇಳಿಕೆ ಕಂಡುಬಂದಿದ್ದು, ಮುಖ್ಯವಾಗಿ ಕಡಿಮೆ ವ್ಯಾಪಾರ ಕೊರತೆ ಈ ಬೆಳವಣಿಗೆಯ ಮೇಲೆ ಪರಿಣಾಮ ಬೀರಿದೆ.
 
ರತ್ನ ಮತ್ತು ಆಭರಣಗಳ ರಫ್ತು ವಹಿವಾಟಿನ ಮೇಲೆ ಚಿನ್ನದ ಆಮದು ಕುಸಿತ ಪರಿಣಾಮ ಬೀರಿದೆ. ಮಾರ್ಚ್ ತಿಂಗಳಲ್ಲಿ ರತ್ನ ಮತ್ತು ಆಭರಣಗಳ ರಫ್ತು ಕೇವಲ 4.6 ಪ್ರತಿಶತ ಏರಿಕೆಯಾಗಿ 3.61 ಬಿಲಿಯನ್ ಡಾಲರ್ ತಲುಪಿದೆ.

ವೆಬ್ದುನಿಯಾವನ್ನು ಓದಿ