ಜಿಗಿದ ಚಿನ್ನ: 10 ಗ್ರಾಂ.ಗೆ ಚಿನ್ನದ ದರ 28,500 ರೂ.

ಬುಧವಾರ, 21 ಜನವರಿ 2015 (18:07 IST)
ಚಿನಿವಾರಪೇಟೆಯಲ್ಲಿ ಚಿನ್ನದ ಏರಿಕೆ ಪ್ರವೃತ್ತಿ ಮುಂದುವರಿದಿದ್ದು, ಐದು ತಿಂಗಳಲ್ಲೇ ಅತ್ಯಧಿಕವಾದ ಪ್ರತಿ 10 ಗ್ರಾಂಗೆ 28,500 ರೂ.ಗೆ ಜಿಗಿದಿದೆ. ಬೆಳ್ಳಿ ಪ್ರತಿ ಕೆಜಿಗೆ 40,000 ರೂ.ಗಳನ್ನು ಗಳಿಸಿದೆ. ಮದುವೆ ಸೀಸನ್ ಬೇಡಿಕೆ ಮತ್ತು ಜಾಗತಿಕ ಬೇಡಿಕೆಯಿಂದ ಈ ಬೆಳವಣಿಗೆ ಉಂಟಾಗಿದೆ. 
 
ಕೈಗಾರಿಕಾ ಘಟಕಗಳು ಮತ್ತು ನಾಣ್ಯ ತಯಾರಕರ ಖರೀದಿಯಿಂದ ಬೆಳ್ಳಿ 950 ರೂ. ಏರಿಕೆಯಾಗಿ 40,150 ರೂಗೆ ಜಿಗಿಯಿತು.ಮದುವೆ ಸೀಸನ್ ಅಲ್ಲದೇ ಆಭರಣ ಮಾಲೀಕರ ಖರೀದಿ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಔನ್ಸ್‌ಗೆ 1300 ರೂ. ದಾಟಿದ್ದು ಕೂಡ ಚಿನ್ನದ ದರ ಏರಿಕೆಗೆ ಉತ್ತೇಜನ ಸಿಕ್ಕಿದೆ.

ನಿಧಾನ ಜಾಗತಿಕ ಬೆಳವಣಿಗೆಯಿಂದ ಕೇಂದ್ರ ಬ್ಯಾಂಕುಗಳು ಚಿನ್ನಕ್ಕೆ ಉತ್ತೇಜನ ನೀಡಲು ಪ್ರೇರೇಪಣೆಯಾಗುತ್ತದೆಂಬ ಊಹಾಪೋಹ ಕೂಡ ಹಳದಿ ಲೋಹಕ್ಕೆ ಬೇಡಿಕೆ ಹೆಚ್ಚಲು ನೆರವಾಯಿತು. 

ವೆಬ್ದುನಿಯಾವನ್ನು ಓದಿ