ಚಿನ್ನದ ದರಗಳು ಪ್ರತಿ 10 ಗ್ರಾಂ.ಗೆ 20,500ಕ್ಕೆ ಕುಸಿಯುವ ನಿರೀಕ್ಷೆ

ಬುಧವಾರ, 29 ಜುಲೈ 2015 (20:13 IST)
ಚಿನ್ನದ ಧಾರಣೆ ಭಾರತದಲ್ಲಿ ಪ್ರತಿ 10 ಗ್ರಾಂ.ಗಳಿಗೆ 20,500 ಕುಸಿಯುತ್ತದೆಂದು ನಿರೀಕ್ಷಿಸಲಾಗಿದೆ. ಈ ದರವು ಸುಮಾರು 5 ವರ್ಷಗಳ ಹಿಂದಿನ ದರವಾಗಿತ್ತು. ಈ ವರ್ಷಾಂತ್ಯದಲ್ಲಿ ಫೆಡರಲ್ ರಿಸರ್ವ್ ಬಡ್ಡಿ ದರವನ್ನು ಏರಿಕೆ ಮಾಡಿದರೆ ಚಿನ್ನದ ದರ 20,500 ರೂ.ಗೆ ಕುಸಿಯುವ ಅಂದಾಜಿದೆ ಎಂದು ಭಾರತ ರೇಟಿಂಗ್ಸ್ ಮತ್ತು ರಿಸರ್ಚ್ ತಿಳಿಸಿದೆ. 
 
ಸ್ಥಳೀಯ ದರಗಳು ಪ್ರತಿ 10 ಗ್ರಾಂ.ಗೆ 20,500 ರಿಂದ 24,000 ರೂ.ಗೆ ಕುಸಿಯುತ್ತದೆ ಎಂದು ರೇಟಿಂಗ್ ಏಜನ್ಸಿ ತಿಳಿಸಿದೆ.  ಜಾಗತಿಕ ದರಗಳು ಕೂಡ ಕುಸಿದು ಪ್ರತಿ ಔನ್ಸ್‌ಗೆ 900-1500 ಡಾಲರ್‌ಗೆ ಇಳಿಯಲಿದೆ ಎಂದು ಅದು ತಿಳಿಸಿದೆ. 
 
ಅಮೆರಿಕದ ಬಡ್ಡಿ ದರಗಳು ಮತ್ತು ಚಿನ್ನದ ದರಗಳು ನಕಾರಾತ್ಮಕ ಪರಸ್ಪರ ಸಂಬಂಧ ಹೊಂದಿವೆ. ಇದೇ ರೀತಿ ಡಾಲರ್ ಸೂಚ್ಯಂಕ ನಕಾರಾತ್ಮಕ ಸಂಬಂಧ ಹೊಂದಿವೆ ಎಂದು ಅದು ತಿಳಿಸಿದೆ. 

ವೆಬ್ದುನಿಯಾವನ್ನು ಓದಿ