2 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದ ಬಂಗಾರದ ಬೆಲೆ

ಸೋಮವಾರ, 13 ಮಾರ್ಚ್ 2017 (09:24 IST)
ಏರುಗತಿಯಲ್ಲೇ ಸಾಗುತ್ತಿದ್ದ ಬಂಗಾರದ ಬೆಲೆ ದಿಢೀರ್ ಕುಸಿದಿದೆ. ಪ್ರತೀ 10 ಗ್ರಾಂ ಚಿನ್ನದ ಬೆಲೆಯಲ್ಲಿ 400 ರೂಪಾಯಿ ಕುಸಿದಿದ್ದು, 28.850 ರೂ. ಬೆಲೆ ದಾಖಲಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆ ಮತ್ತು ದೇಶೀಯ ಆಭರಣ ತಯಾರಕರಿಂದ ಬಂಗಾರದ ಬೇಡಿಕೆ ಕುಸಿತದಿಂದಾಗಿ ಬೆಲೆ ಇಳಿದಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಬೆಳ್ಳಿ ಬೆಲೆಯಲ್ಲಿ ಪ್ರತಿ ಕೆ.ಜಿಗೆ 525 ರೂ. ಕುಸಿದಿದ್ದು, 40.975 ರೂ. ಬೆಲೆ ದಾಖಲಾಗಿದೆ.

ಜನವರಿ 7ರಿಂದೀಚೆಗೆ ಸರಿ ಸುಮಾರು 2 ತಿಂಗಳಲ್ಲೇ ಇದು ಕನಿಷ್ಠ ಬೆಲೆ ಎನ್ನಲಾಗಿದೆ. 2 ತಿಂಗಳಲ್ಲಿ ಪ್ರತಿ 10 ಗ್ರಾಂ ಬಂಗಾರದ ಬೆಲೆಯಲ್ಲಿ 850 ರೂ. ಕುಸಿದಿದೆ.

 

ವೆಬ್ದುನಿಯಾವನ್ನು ಓದಿ