ಚಿನ್ನದ ದರ 410 ರೂ. ಕುಸಿತ, ಪ್ರತಿ 10 ಗ್ರಾಂ.ದರ 26,690

ಸೋಮವಾರ, 30 ಮಾರ್ಚ್ 2015 (17:15 IST)
ಚಿನ್ನದ ದರಗಳು  410 ರೂ. ಕುಸಿದು ಪ್ರತಿ 10 ಗ್ರಾಂ.ಗಳಿಗೆ 26, 690 ರೂ.ಗೆ  ನವದೆಹಲಿಯ ಚಿನಿವಾರಪೇಟೆಯಲ್ಲಿ ತಲುಪಿದೆ.ದುರ್ಬಲ ಜಾಗತಿಕ ಪ್ರವೃತ್ತಿ ಮತ್ತು ಆಭರಣಗಾರರ ಬೇಡಿಕೆ ಕುಸಿತದಿಂದ ಈ ಬೆಳವಣಿಗೆ ಉಂಟಾಗಿದೆ. ಬೆಳ್ಳಿ ಕೂಡ 550 ರೂ. ತೀವ್ರ ಕುಸಿತ ಕಂಡಿದ್ದು, ಕೆಜಿಗೆ 38,000 ರೂ.ಗೆ ಮುಟ್ಟಿದೆ. ಕೈಗಾರಿಕೆ ಬಳಕೆದಾರರು ಮತ್ತು ನಾಣ್ಯ ತಯಾರಕರು ಬೆಳ್ಳಿಯ ಮಾರಾಟ ಮಾಡಿದ್ದರಿಂದ ಈ ಬೆಳವಣಿಗೆ ಉಂಟಾಗಿದೆ. 
 
 ಆಭರಣದಾರರ ಬೇಡಿಕೆ ಕುಸಿತದ ಜೊತೆಗೆ ಬಡ್ಡಿ ದರಗಳು ಈ ವರ್ಷ ಏರಬಹುದೆಂದು ಅಮೆರಿಕ ಫೆಡರಲ್ ರಿಸರ್ವ್ ಇಂಗಿತ ನೀಡಿರುವುದರಿಂದ ಕೂಡ ದೇಶೀಯ ಮಾರುಕಟ್ಟೆಗಳಲ್ಲಿ ಚಿನ್ನ ಬೆಳ್ಳಿದರಗಳಲ್ಲಿ ಕುಸಿತ ಉಂಟಾಯಿತು. 
 
 ರಾಷ್ಟ್ರೀಯ ರಾಜಧಾನಿಯಲ್ಲಿ 99.9 ಶುದ್ಧತೆಯ ಚಿನ್ನ 410 ರೂ. ತೀವ್ರ ಕುಸಿತ ದಾಖಲಿಸಿ 10 ಗ್ರಾಂ.ಗೆ 26,690ಕ್ಕೆ ಮುಟ್ಟಿತು.  99.5 ಶುದ್ಧತೆಯ ಚಿನ್ನ ತಲಾ 10 ಗ್ರಾಂ.ಗೆ 360 ರೂ. ಕುಸಿದು 26, 540 ರೂ. ಮುಟ್ಟಿತು. 

ವೆಬ್ದುನಿಯಾವನ್ನು ಓದಿ