ಚಿನ್ನದ ದರ 85 ರೂ. ಏರಿಕೆ, ಪ್ರತಿ 10 ಗ್ರಾಂ.ಗೆ 27, 075 ರೂ

ಶನಿವಾರ, 18 ಏಪ್ರಿಲ್ 2015 (17:29 IST)
ಚಿನ್ನದ ದರಗಳು 85 ರೂ. ಚೇತರಿಸಿಕೊಂಡು ಚಿನಿವಾರ ಪೇಟೆಯಲ್ಲಿ  ಪ್ರತೀ 10 ಗ್ರಾಂ.ಗೆ 27,075 ರೂ.ಗೆ ಮುಟ್ಟಿದೆ. ಆಭರಣ ತಯಾರಕರ ಖರೀದಿ ಭರಾಟೆ ಮತ್ತು ಸಾಗರೋತ್ತರ ಮಾರುಕಟ್ಟೆಗಳ ಸಕಾರಾತ್ಮಕ ಪ್ರತಿಕ್ರಿಯೆಯಿಂದ ಈ ಬೆಳವಣಿಗೆ ಉಂಟಾಗಿದೆ. ಬೆಳ್ಳಿ ಒತ್ತಡಕ್ಕೆ ಒಳಗಾಗಿ 100 ರೂ. ಕುಸಿತವುಂಟಾಗಿದ್ದು, ಪ್ರತಿ ಕೆಜಿಗೆ 36,800 ರೂ.ಗೆ ಮುಟ್ಟಿದೆ.
 
ವಿವಾಹ ಸೀಸನ್ ಬೇಡಿಕೆ ಪೂರೈಸುವುದಕ್ಕೆ ಹೊಸ ಖರೀದಿ ಸೇರಿದಂತೆ ದೃಢವಾದ ಜಾಗತಿಕ ಪ್ರವೃತ್ತಿ ಚಿನ್ನದ ದರಗಳ ಚೇತರಿಕೆಗೆ ಕೊಡುಗೆ ನೀಡಿದೆ. 
ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಪ್ರವೃತ್ತಿಯನ್ನು ನಿರ್ಧರಿಸುವ ಚಿನ್ನವು ನ್ಯೂಯಾರ್ಕ್‌ನಲ್ಲಿ ಶೇ. 0.46ರಷ್ಟು ಏರಿಕೆಯಾಗಿ ಶುಕ್ರವಾರ ವಹಿವಾಟಿನಲ್ಲಿ ಔನ್ಸ್‌ಗೆ 1203 ಡಾಲರ್ ಮುಟ್ಟಿದೆ.

ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ  99.9 ಮತ್ತು 99.5 ಶುದ್ಧತೆಯ ಚಿನ್ನವು 85 ರೂ. ಚೇತರಿಕೆಯಾಗಿ ಪ್ರತಿ ಹತ್ತು ಗ್ರಾಂ.ಗೆ 27,075 ಮತ್ತು 26, 925 ರೂ. ತಲುಪಿದೆ.  ಸವರನ್ ಚಿನ್ನವು ಪ್ರತಿ 8 ಗ್ರಾಂ.ಗೆ 23,700 ರೂ.ಗೆ ಮಾರಾಟವಾಗಿದೆ. 
 

ವೆಬ್ದುನಿಯಾವನ್ನು ಓದಿ