ಚಿನ್ನದ ಧಾರಣೆ ಕುಸಿತ, ಬೆಳ್ಳಿಯ ದರ ಏರಿಕೆ

ಗುರುವಾರ, 30 ಜುಲೈ 2015 (20:10 IST)
ದಾಸ್ತಾನುದಾರರು ಮತ್ತು ಆಭರಣ ವ್ಯಾಪಾರಿಗಳ ಮಾರಾಟ ಒತ್ತಡದಿಂದ ಚಿನ್ನದ ದರಗಳು ಮತ್ತಷ್ಟು ಕುಸಿತ ಅನುಭವಿಸಿದೆ.  ಬೆಳ್ಳಿ ದರಗಳು ಸುಸ್ಥಿರ ಕೈಗಾರಿಕೆಗಳ  ಖರೀದಿಯಿಂದಾಗಿ ಇನ್ನಷ್ಟು ಲಾಭ ಗಳಿಸಿದೆ. 
 
99. 5 ಶುದ್ಧತೆಯ ಸ್ಟಾಂಡರ್ಡ್ ಚಿನ್ನವು 160 ರೂ. ಕುಸಿದು ಹಿಂದಿನ ಮುಕ್ತಾಯದ ಮಟ್ಟವಾದ 24, 835ಕ್ಕೆ ಬದಲಾಗಿ ಪ್ರತಿ 10 ಗ್ರಾಂ.ಗೆ 24, 675ರೂ. ಮುಟ್ಟಿದೆ.

 99. 9 ಶುದ್ಧತೆಯ ಶುದ್ಧ ಚಿನ್ನವು ಅದೇ ಅಂತರದಲ್ಲಿ ಕುಸಿತಗೊಂಡಿದ್ದು, ಹಿಂದಿನ ದರವಾದ 24, 985ರಿಂದ ಪ್ರತಿ ಹತ್ತು ಗ್ರಾಂ.ಗೆ 24, 825 ರೂಗೆ ಕುಸಿದಿದೆ. 
ಆದಾಗ್ಯೂ .999 ಶುದ್ಧತೆಯ ಬೆಳ್ಳಿಯು 75 ರೂ. ಏರಿಕೆಯಾಗಿ ಪ್ರತಿ ಕೆಜಿಗೆ 34, 415 ರೂ.ಗಳಲ್ಲಿ ಸ್ಥಿರವಾಗಿದೆ. 
 
 

ವೆಬ್ದುನಿಯಾವನ್ನು ಓದಿ