50 ರೂ. ಕುಸಿದ ಚಿನ್ನ, ಪ್ರತಿ 10 ಗ್ರಾಂ.ಗೆ 26, 600 ರೂ

ಶುಕ್ರವಾರ, 9 ಅಕ್ಟೋಬರ್ 2015 (19:35 IST)
ಆಭರಣ ಮಾರಾಟಗಾರರ ಬೇಡಿಕೆ ಕುಸಿತದಿಂದ ಚಿನಿವಾರ ಪೇಟೆಯಲ್ಲಿ ಚಿನ್ನದದರವು 50 ರೂ. ಕುಸಿದು ಪ್ರತಿ 10 ಗ್ರಾಂ.ಗಳಿಗೆ 26, 600 ರೂ.ಗೆ ಮುಟ್ಟಿದೆ.  ಆದಾಗ್ಯೂ ಬೆಳ್ಳಿಯು ಚೇತರಿಸಿಕೊಂಡು 100 ರೂ. ಏರಿಕೆಯಾಹಿ ಪ್ರತಿ ಕೆಜಿಗೆ 36, 800 ರೂ. ಮುಟ್ಟಿದೆ. ಆಭರಣ ಮಾರಾಟಗಾರರು ಮತ್ತು ಚಿಲ್ಲರೆ ಮಾರಾಟಗಾರರಿಂದ ಚಿನ್ನಕ್ಕೆ ಬೇಡಿಕೆ ಕುಸಿತವು ಇದಕ್ಕೆ ಕಾರಣ ಎಂದು ಚಿನ್ನದ ವ್ಯಾಪಾರಿಗಳು ಹೇಳಿದ್ದಾರೆ.
 
ಆದರೆ ವಿದೇಶಗಳಲ್ಲಿ ದೃಢ ಪ್ರವೃತ್ತಿಯಿಂದ ಜಾಗತಿಕವಾಗಿ ನಷ್ಟವನ್ನು ಸರಿದೂಗಿಸಲಾಗಿದೆ.  ರಾಷ್ಟ್ರದ ರಾಜಧಾನಿಯಲ್ಲಿ 99.9 ಮತ್ತು  99.5 ಶುದ್ಧತೆಯ ಚಿನ್ನವು 50 ರೂ. ಕುಸಿದು ಪ್ರತಿ 10 ಗ್ರಾಂ.ಗೆ 26, 600 ಮತ್ತು 26, 450 ರೂ.ಗೆ ಮುಟ್ಟಿದೆ. ಸವರನ್ ನಾಣ್ಯವು ಪ್ರತಿ ಹತ್ತುಗ್ರಾಂಗೆ 22, 400 ರೂ.ಗೆ ಮುಟ್ಟಿದೆ.
 
ಸಿದ್ಧಪಡಿಸಿದ ಬೆಳ್ಳಿಯು 100 ರೂ. ಏರಿಕೆಯಾಗಿ ಪ್ರತಿ ಕೆಜಿಗೆ 36, 800 ರೂ. ಮುಟ್ಟಿದೆ ಮತ್ತು ಬೆಳ್ಳಿಯ ನಾಣ್ಯಗಳು  100 ನಾಣ್ಯಗಳ ಖರೀದಿ ದರ 51,000 ಮತ್ತು ಮಾರಾಟ ದರ 52,000 ರೂ.ಗಳನ್ನು ಮುಟ್ಟಿದೆ. 
 

ವೆಬ್ದುನಿಯಾವನ್ನು ಓದಿ