ಜಿಯೋ ಎಫೆಕ್ಟ್: ಏರ್‌ಟೆಲ್ 4ಜಿ ಸೇವೆಗಳ ಮೇಲೆ ಶೇ.80ರಷ್ಟು ರಿಯಾಯಿತಿ

ಬುಧವಾರ, 31 ಆಗಸ್ಟ್ 2016 (10:16 IST)
ಭಾರತೀಯ ಟೆಲಿಕಾಂ ವಲಯದಲ್ಲಿ ರಿಲಾಯನ್ಸ್ ಕಮ್ಯೂನಿಕೇಶನ್ಸ್‌ನಿಂದ ಜಿಯೋ 4ಜಿ ಸೇವೆ ಆರಂಭವಾಗುತ್ತಿದ್ದಂತೆ, ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಭಾರತೀಯ ಏರ್‌ಟೆಲ್ ತನ್ನ 3ಜಿ ಹಾಗೂ 4ಜಿ ಸೇವೆಗಳ ದರವನ್ನು 80 ಪ್ರತಿಶತದಷ್ಟು ಕಡಿತಗೊಳಿಸಿದೆ. 
 
ಮಾರುಕಟ್ಟೆ ಪೈಪೋಟಿಯನ್ನು ಎದುರಿಸುವ ಹಿನ್ನೆಲೆಯಲ್ಲಿ ಕೇವಲ 51 ರೂಪಾಯಿ ದರದಲ್ಲಿ 1ಜಿಬಿ ಡೇಟಾ ಸೇವೆಯನ್ನು ನೀಡುವ ಮೂಲಕ ಏರ್‌ಟೆಲ್ ಗ್ರಾಹಕರನ್ನು ಸೇಳೆಯಲು ಯತ್ನಿಸುತ್ತಿದೆ. 
 
ಏರ್‌ಟೆಲ್ ಚಂದಾದಾರರು 1498 ರೂಪಾಯಿಗಳ ರಿಚಾರ್ಚ್ ಮಾಡಿಸಿಕೊಳ್ಳುವ ಮೂಲಕ 30 ದಿನಗಳ ಕಾಲಾವಧಿಗಾಗಿ 1 ಜಿಬಿ 3ಜಿ ಹಾಗೂ 4ಜಿ ಡೇಟಾ ಸೇವೆಯನ್ನು ಪಡಿಯಬಹುದು. ಈ ಯೋಜನೆಯಲ್ಲಿ ಪಡೆದ 1 ಜಿಬಿ ಡೇಟಾ ಮುಕ್ತಾಯದ ನಂತರ, ಮುಂದಿನ ಪ್ರತಿ 1ಜಿಬಿ ಡೇಡಾ ಸೇವೆಯನ್ನು 12 ತಿಂಗಳವರೆಗೂ ಕೇವಲ 51 ರೂಪಾಯಿ ದರದಲ್ಲಿ ಪಡೆಯಬಹುದಾಗಿದೆ. ಈ 12 ತಿಂಗಳ ಅವಧಿಯಲ್ಲಿ ಅನಿಯಮಿತಯಾಗಿ 51 ರೂಪಾಯಿಗಳ ರಿಚಾರ್ಜ್ ಮಾಡಿಸಿಕೊಂಡು ಡೇಟಾ ಸೇವೆಯನ್ನು ಆನಂದಿಸಬಹುದಾಗಿದೆ. 
 
ಪ್ರಸ್ತುತ, ಏರ್‌ಟೆಲ್ 1ಜಿಬಿ 259 ರೂಪಾಯಿ ದರದಲ್ಲಿ 28 ದಿನಗಳ ಅವಧಿಗೆ 1ಜಿಬಿ 3ಜಿ ಹಾಗೂ 4ಜಿ ಸೇವೆಯನ್ನು ನೀಡುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ