ಶುಭ ಸುದ್ದಿ : ಫೇಸ್‌ಬುಕ್, ಟ್ವಿಟ್ಟರ್ ಮೂಲಕ ಬ್ಯಾಂಕ್ ಸೇವೆ ಒದಗಿಸಲಿರುವ ಎಸ್‌ಬಿಐ

ಶನಿವಾರ, 2 ಜುಲೈ 2016 (19:55 IST)
ಸಾಮಾಜಿಕ ಜಾಲತಾಣಾದ ಫೇಸ್‌ಬುಕ್ ಮತ್ತು ಟ್ವಿಟರ್ ಮೂಲಕ ಗ್ರಾಹಕರು ಬ್ಯಾಂಕಿಂಗ್ ಸೇವೆಯನ್ನು ಪಡೆಯಲು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ), 'ಎಸ್‌ಬಿಐ ಮಿಂಗಲ್' ಯೋಜನೆಯನ್ನು ಅನಾವರಣಗೊಳಿಸಿದೆ. 
 
ಎಸ್‌ಬಿಐ ಮಿಂಗಲ್' ಯೋಜನೆ ಬಳಸುವ ಮೂಲಕ, ಗ್ರಾಹಕರು ತಮ್ಮ ಅನುಕೂಲಕ್ಕಾಗಿ ಫೇಸ್‌ಬುಕ್ ಮತ್ತು ಟ್ವಿಟರ್ ಮೂಲಕ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದು ಎಂದು ಎಸ್‌ಬಿಐ ಪತ್ರಿಕಾ ಪ್ರಕಟಣೆ ಹೊರಡಿಸಿದೆ. 
 
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ 61 ನೇಯ ಬ್ಯಾಂಕ್ ದಿನಾಚರಣೆ ಅಂಗವಾಗಿ ಎಸ್‌ಬಿಐ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಈ ಹೊಸ ಯೋಜನೆಯನ್ನು ಬಿಡುಗಡೆಗೊಳಿಸಿದರು. 
 
ಗ್ರಾಹಕರಿಗೆ ಹೆಚ್ಚಿನ ಸೇವೆಗಳನ್ನು ನೀಡಲು ಯೋಜನೆಗಳನ್ನು ರೂಪಿಸುತ್ತಿದ್ದು, ಈ ಹೊಸ ಯೋಜನೆಯ ಅಡಿಯಲ್ಲಿ ಚೆಕ್‌ಬುಕ್ ವಿನಂತಿ, ಸ್ಟಾಪ್ ಚೆಕ್, ಮೊಬೈಲ್ ಬ್ಯಾಂಕಿಂಗ್ ನೋಂದಣಿ, ಇಂಟರ್‌ನೆಟ್ ಬ್ಯಾಂಕಿಂಗ್, ಎಸ್‌ಎಮ್‌ಎಸ್ ಅಲರ್ಟ್ ಮತ್ತು ಎಟಿಎಮ್/ಡೆಬಿಟ್ ಕಾರ್ಡ್‌ ಬ್ಲಾಕ್ ಸೇವೆಯನ್ನು ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ