ಡ್ರೈವರ್‌‌ ರಹಿತ ಕಾರಿನಲ್ಲಿ ಸುತ್ತಾಡಲು ಸಜ್ಜಾಗಿ !

ಸೋಮವಾರ, 25 ಆಗಸ್ಟ್ 2014 (19:25 IST)
ಸ್ವಲ್ಪ ಯೋಚಿಸಿ ರಸ್ತೆಯ  ಮೇಲೆ ಒಂದು ಕಾರು ಓಡುತ್ತದೆ, ಇತರ ವಾಹನಗಳಿಂದ ಬಚಾವಾಗಿ, ರೆಡ್‌‌‌ ಲೈಟ್‌‌‌‌ ಬಿದ್ದಾಗ ನಿಲ್ಲುತ್ತದೆ, ಎಲ್ಲವು ಕಂಟ್ರೋಲ್‌‌‌ನಲ್ಲಿರುತ್ತದೆ. ಇದರಲ್ಲೇನು ವಿಶೇಷ ಎಂದು ನೀವು ಕೇಳಬಹುದು. ಇದರಲ್ಲಿ ವಿಶೇಷವೇನೆಂದರೆ ಈ ಕಾರಿನಲ್ಲಿ ಡ್ರೈವರ್‌ ಇರುವುದಿಲ್ಲ. ಅಚ್ಚರಿಯಾಗುತ್ತಿದೆಯಾ? ಕಲ್ಪನೆಯಲ್ಲಿ ಮಾತ್ರ ನೆನೆಸಿಕೊಳ್ಳುವಂತಹ ಕನಸು ಇದೀಗ ನನಸಾಗಿದೆ, ಚಾಲಕನಿಲ್ಲದೇ ಚಲಿಸುವಂತಹ ಕಾರು ಇದೀಗ ರಸ್ತೆಗಿಳಿದಿದೆ. 
 
1925 ರಲ್ಲಿ ವಂಡರ್‌ ಕಾರ್‌ ಎಂಬ ಹೆಸರಿನ ಡ್ರೈವರ್‌ ರಹಿತ ಕಾರು ಅಸ್ತಿತ್ವಕ್ಕೆ ಬಂದಿತ್ತು, ಆಗ ಅಮೆರಿಕಾದ ನ್ಯೂಯಾರ್ಕ್‌‌‌‌‌ ರಸ್ತೆಗೆ ಇನರಿಕೈನ್‌ ವಂಡರ್‌ ಹೆಸರಿನ ಕಾರು ಇಳಿದಿತ್ತು. ಈ ಕಾರು ರೇಡಿಯೋ ಕಂಟ್ರೋಲ್‌‌ನಿಂದ ಚಲಿಸುತ್ತಿತ್ತು.  ಇದರ ನಂತರ ಡ್ರೈವರ್‌‌‌ ರಹಿತ ಕಾರನ್ನು ಉತ್ಪಾದಿಸುವತ್ತ ತಜ್ಞರು ತಮ್ಮ ಗಮನಹರಿಸಿದರು. 
 
2010ರಲ್ಲಿ ನಾಲ್ಕು ಡ್ರೈವರ್‌‌ಲೆಸ್‌ ಕಾರನ್ನು ಇಟಲಿಯಿಂದ ಚೀನಾದವರೆಗೆ 800 ಮೈಲು ದೂರದವರೆಗೆ ಯಶಸ್ವಿಯಾಗಿ ಚಲಿಸಿತ್ತು. ಭಾರತದಲ್ಲಿ ಚಾಲಕನಿಲ್ಲದ‌ ಕಾರಿಗೆ ಚಲಿಸುವ ಅನುಮತಿ ಇಲ್ಲ. ಆದರೆ, ಅಮೆರಿಕಾದ ನೆವಾದಾ, ಫ್ಲೋರಿಡಾ, ಕ್ಯಾಲಿಫಾರ್ನಿಯಾ ಮತ್ತು ಮಿಚಿಗನ್‌‌ನಂತಹ ನಗರಳಲ್ಲಿ ಮಾತ್ರ ಅವಕಾಶವಿದೆ. 
 
ಗೂಗಲ್‌ ಕಾರ್‌ : 
ಇದೀಗ ಗೂಗಲ್‌‌ ಕಂಪೆನಿ ಕೂಡ ಡ್ರೈವರ್‌‌ಲೆಸ್‌ ಕಾರಿನ ಪ್ರೊಜೆಕ್ಟ್‌‌‌‌ ಮೇಲೆ ಕಾರ್ಯನಿರ್ವಹಿಸುತ್ತಿದೆ. ಈ ಡ್ರೈವರ್‌ಲೆಸ್‌ ಕಾರಿನ ಹೆಸರು 'ಗೂಗಲ್‌ ಶಾಫರ್‌' ಎಂದಿದೆ.  ಇದೇ ಪ್ರೊಜೆಕ್ಟ್‌‌ ಮೇಲೆ ಕಂಪೆನಿ ದೀರ್ಘಾವಧಿಯಿಂದ ಕಾರ್ಯನಿರ್ವಹಿಸುತ್ತಿದೆ, ಆದರೆ ಇದೇ ವರ್ಷ ಮೇ 28 ರಂದು ಕಂಪೆನಿ ಡ್ರೈವರ್‌ಲೆಸ್‌ ಕಾರನ್ನು ವಿಶ್ವಕ್ಕೆ ಪರಿಚಯಿಸಿತ್ತು. ಇದರಲ್ಲಿ ಸ್ಟೆಯರಿಂಗ್‌, ಬ್ರೆಕ್‌, ಗೇರ್‌‌ ಕ್ಲಚ್‌ ಇರಲಿಲ್ಲ. ಗೂಗಲ್‌ ವಿವಿಧ ಕಂಪೆನಿಗಳ ಕಾರುಗಳ ಮೇಲೆ ತನ್ನ ತಂತ್ರಜ್ಞಾನ ಬಳಸಿಕೊಂಡು ಇವುಗಳನ್ನು ಡ್ರೈವರ್‌ಲೆಸ್‌‌ ಮಾಡಲು ಟ್ರಾಯಲ್‌ ರನ್‌ ಮಾಡುತ್ತಿದೆ. 
 
ಇದೇ ವರ್ಷ ಎಪ್ರಿಲ್‌‌‌‌ನಲ್ಲಿ ಕಂಪೆನಿ ನೀಡಿದ ಮಾಹಿತಿ ಪ್ರಕಾರ, ಈ ಕಾರು ಇಲ್ಲಿಯವರೆಗೆ 11 ಲಕ್ಷ ಕಿಮೀ, ಚಾಲಕ ರಹಿತವಾಗಿ ಚಲಿಸಿದೆ. ಈ ಗೂಗಲ್‌‌ ಕಾರಿನ ಮೇಲ್ಚಾವಣಿಯಲ್ಲಿ ಒಂದು ರೆಂಜ್‌‌ ಫೈಂಡರ್‌ ವಿಲೊಡಾಯಿನ್‌ 64 ಬಿಮ್‌ ಲೇಸರ್‌ ಅಳವಡಿಸಲಾಗಿದೆ. ಈ ಲೇಸರ್‌‌‌ನಿಂದ ವಾಹನಕ್ಕೆ ತನ್ನ ಹತ್ತಿರದ ಥ್ರೀ-ಡಿ ಇಮೇಜ್‌ ಲಭಿಸುತ್ತದೆ. ಈ ಆಧಾರದ ಮೇಲೆ ಕಾರು ತನ್ನ ರಸ್ತೆಯನ್ನು ಸೆಟ್‌ ಮಾಡುತ್ತದೆ ಮತ್ತು ಯಾವುದೇ ವಾಹನಕ್ಕೆ ಡಿಕ್ಕಿ ಹೊಡೆಯದೆ ಮುಂದೆ ಸಾಗುತ್ತದೆ. 

ವೆಬ್ದುನಿಯಾವನ್ನು ಓದಿ