ಡೆಲಿವರಿ ಬಾಯ್ಸ್ ಸಂತೋಷಕ್ಕೆ ಗೂಗಲ್ ವಿಡಿಯೋ ಬಿಡುಗಡೆ

ಶುಕ್ರವಾರ, 19 ಡಿಸೆಂಬರ್ 2014 (17:13 IST)
ಬದಲಾವಣೆ ನಿಸರ್ಗದ ನಿಯಮ. ನಾವು ಮಾನವರು ಅದನ್ನು ನಿಷ್ಠೆಯಿಂದ ಪಾಲಿಸುತ್ತೇವೆ. ಕೆಲವು ವರ್ಷಗಳಿಂದ ನಾವು ಶಾಪಿಂಗ್ ಮಾಡುವ ವಿಧಾನವೂ ಬದಲಾಗಿದೆ. ಅಕ್ಷರಶಃ ಅಸ್ತಿತ್ವದಲ್ಲೇ ಇರದಿದ್ದ ಇಂಟರ್ನೆಟ್‌ನಲ್ಲಿ ಸರಕು ಖರೀದಿ ಪ್ರಕ್ರಿಯೆ ಈಗ ಪ್ರತೀ ವರ್ಷ ಕೋಟ್ಯಂತರ ರೂ. ವಹಿವಾಟು ನಡೆಸುತ್ತಿದೆ. ಆನ್‌ಲೈನ್ ಶಾಪಿಂಗ್ ನಮ್ಮ ಜೀವನವನ್ನು ಸುಗಮವಾಗಿಸಿರುವುದು ಅನುಕೂಲಗಳಲ್ಲಿ ಒಂದು.

ನಮ್ಮ ಮನೆಬಾಗಿಲಿಗೆ ಪ್ರತಿಯೊಂದು ಕಾಲಮಿತಿಯೊಳಗೆ ಉತ್ಪನ್ನ ಡೆಲಿವಿರಿ ಆಗುವುದರಿಂದ ನಮ್ಮ ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ. ಆದರೆ ನಿಮ್ಮ ಜೀವನವನ್ನು ಸುಲಭಗೊಳಿಸಲು ಶ್ರಮಪಡುವ ಜನರ ಬಗ್ಗೆ ಕಲ್ಪಿಸಿಕೊಂಡಿದ್ದೀರಾ. ಅವರು ನಿಮ್ಮಿಂದ ಧನ್ಯವಾದವನ್ನು ಕೂಡ ನಿರೀಕ್ಷಿಸುವುದಿಲ್ಲ.

ನಾವು ಡೆಲಿವರಿ ಬಾಯ್ಸ್ ಬಗ್ಗೆ ಮಾತನಾಡುತ್ತಿರುವುದು. ನೀವು ನಿರೀಕ್ಷಿಸುತ್ತಿರುವ ಉತ್ಪನ್ನದ ಡೆಲಿವರಿಗೆ ನೂರಾರು ಕಿಮೀ ದೂರ ಪ್ರಯಾಣಿಸುತ್ತಾರೆ.ಅದಕ್ಕೆ ಪ್ರತಿಯಾಗಿ ನಿಮ್ಮ ಮುಖದಲ್ಲಿ ಕಿರುನಗೆಯನ್ನು ಅವರು ನಿರೀಕ್ಷಿಸುತ್ತಾರೆ. ಮೂರು ದಿನಗಳ ಗ್ರೇಟ್ ಆನ್‌ಲೈನ್ ಶಾಪಿಂಗ್‌ನ ಭಾರೀ ಯಶಸ್ಸನ್ನು ಗೂಗಲ್, ಆನ್‌ಲೈನ್ ಶಾಪಿಂಗ್ ಅವಿಭಾಜ್ಯ ಅಂಗವಾದ ಡೆಲಿವರಿ ಬಾಯ್ಸ್ ಜೊತೆ ಹಂಚಿಕೊಳ್ಳಲು ನಿರ್ಧರಿಸಿದೆ.

ಇದಕ್ಕಾಗಿ ಗೂಗಲ್ ಹೊಸ ಅಭಿಯಾನ 'ಸ್ಪೆಷನ್ ಡೆಲಿವರಿ'ಯನ್ನು ಆರಂಭಿಸಿದ್ದು ಸಂತೋಷವನ್ನು ಹಂಚುವ ಜನರ ಮುಖದಲ್ಲಿ ನಗು ತರುವುದಕ್ಕೆ ಯತ್ನಿಸಿದೆ. ಈ ಅಭಿಯಾನದಡಿ ಗೂಗಲ್ ಆರಂಭಿಸಿದ ವಿಡಿಯೋದಲ್ಲಿ ಪ್ರತಿಯೊಬ್ಬರಿಗೂ ಉತ್ಪನ್ನ ಸರಬರಾಜು ಮಾಡುವ ಡೆಲಿವರಿ ಬಾಯ್‌ಗೆ ಧನ್ಯವಾದ ಸೂಚಿಸುವಂತೆ ಮನವಿ ಮಾಡಿದೆ. 

ವೆಬ್ದುನಿಯಾವನ್ನು ಓದಿ