ಕಾರಿನಲ್ಲಿ ಆಂಡ್ರಾಯ್ಡ್ ಆವೃತ್ತಿಗೆ ಗೂಗಲ್ ಅಡಿಪಾಯ

ಶುಕ್ರವಾರ, 19 ಡಿಸೆಂಬರ್ 2014 (13:21 IST)
ಗೂಗಲ್ ಈಗ ಕಾರುಗಳಲ್ಲಿ ನೇರವಾಗಿ ನಿರ್ಮಿಸುವ ಆಂಡ್ರಾಯ್ಡ್ ಆವೃತ್ತಿಗೆ ಅಡಿಪಾಯ ಹಾಕುತ್ತಿದೆ ಎಂದು ಮೂಲಗಳು ಹೇಳಿವೆ. ಇದರಿಂದಾಗಿ ಸ್ಮಾರ್ಟ್‌ಫೋನ್‌ಗಳಿಗೆ ಪ್ಲಗಿಂಗ್ ಮಾಡದೆಯೇ ಅಂತರ್ಜಾಲದ ಎಲ್ಲಾ ಸೌಲಭ್ಯಗಳನ್ನು ಅನುಭವಿಸಲು ಚಾಲಕರಿಗೆ ಸಾಧ್ಯವಾಗಲಿದೆ.

ಗೂಗಲ್‌ನ ಪ್ರಸಕ್ತ ಆಂಡ್ರಾಯ್ಡ್ ಆಟೋ ಸಾಫ್ಟ್‌ವೇರ್‌ನಿಂದ ಈ ಕ್ರಮವು ಪ್ರಮುಖ ಹೆಜ್ಜೆಯಾಗಿದ್ದು, ಸ್ಮಾರ್ಟ್‌ಫೋನ್ ಆಪರೇಟಿಂಗ್ ಸಿಸ್ಟಮ್‌ನ ಹೊಸ ಆವೃತ್ತಿಯೊಂದಿಗೆ ಕಾಲಿರಿಸಿದ್ದು, ಕಾರಿಗೆ ಫೋನ್ ಪ್ಲಗ್ ಮಾಡಿ, ಸಂಗೀತ, ಗೂಗಲ್ ಆಂಡ್ರಾಯ್ಡ್ ಆಟೋವನ್ನು ನೇರವಾಗಿ ಇರಿಸಲು ಸುದೀರ್ಘಾವಧಿಯ ಯೋಜನೆಗೆ ಯಾವುದೇ ಕಾಲಮಿತಿ ಅಥವಾ ವಿವರನ್ನು ನೀಡಿಲ್ಲ.

ಕಾರಿನಲ್ಲಿ ನೇರ ಸಂಯೋಜನೆಯಿಂದ ಚಾಲಕರು ಇಗ್ನೈಶನ್ ಕೀ ತಿರುಗಿಸಿದಾಗಲೆಲ್ಲಾ ಗೂಗಲ್ ಸೇವೆ ಖಾತರಿಯಾಗಿರುತ್ತದೆ. ಫೋನ್ ಪ್ಲಗ್ ಇನ್ ಮಾಡುವ ಅಗತ್ಯವಿಲ್ಲ. ಇದು ಗೂಗಲ್‌ಗೆ ಕಾರುಗಳ ಕ್ಯಾಮೆರಾ, ಸೆನ್ಸರ್‌ಗಳು, ಇಂಧನ ಗೇಜ್ ಮತ್ತು ಅಂತರ್ಜಾಲದ ಸಂಪರ್ಕಗಳನ್ನು ಹೆಚ್ಚು ಬಳಸಲು ಸಹಾಯವಾಗುತ್ತದೆ.ಮ್ಯಾಪ್ಸ್ ಮತ್ತಿತರ ಅಪ್ಲಿಕೇಷಶನ್ ವೀಕ್ಷಣೆಗೆ ಸ್ಕ್ರೀನ್ ನಿರ್ಮಿಸಲಾಗಿರುತ್ತದೆ. 

ವೆಬ್ದುನಿಯಾವನ್ನು ಓದಿ