ನೇಪಾಳ ಭೂಕಂಪದಲ್ಲಿ ಸಂತ್ರಸ್ತರ ಪತ್ತೆಗೆ ಗೂಗಲ್‌ನ ಪೀಪಲ್ ಫೈಂಡರ್ ಟೂಲ್

ಶನಿವಾರ, 25 ಏಪ್ರಿಲ್ 2015 (17:44 IST)
ನೇಪಾಳದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ನೂರಾರು ಜನರು ಬಲಿಯಾಗಿರುವ ಹಿನ್ನೆಲೆಯಲ್ಲಿ ವಿಶ್ವದ ಟಾಪ್ ಸರ್ಚ್ ಇಂಜಿನ್ ಗೂಗಲ್ ಪೀಪಲ್ ಫೈಂಡರ್ ಟೂಲ್ ಆರಂಭಿಸುವ ಮೂಲಕ ನೇಪಾಳದಲ್ಲಿ ಭೂಕಂಪಕ್ಕೆ ಸಿಕ್ಕಿಬಿದ್ದ ಸಂತ್ರಸ್ತರಿಗೆ ನೆರವಾಗಲು ನಿರ್ಧರಿಸಿದೆ. ಭೂಕಂಪದ ವಿನಾಶದಿಂದ ಸಂತ್ರಸ್ತರಾದ ಜನರ ಬಗ್ಗೆ ಮಾಹಿತಿ ಸಂಗ್ರಹಿಸುವುದು ಮತ್ತು ಮಾಹಿತಿ ಮುಟ್ಟಿಸುವುದು ಇದರ ಗುರಿಯಾಗಿದೆ. 
 
ಈ ವೆಬ್ ಅಪ್ಲಿಕೇಷನ್‌ನಲ್ಲಿ ವ್ಯಕ್ತಿಗಳು ಭೂಕಂಪದಲ್ಲಿ ಸಂತ್ರಸ್ತರಾದ ತಮ್ಮ ಬಂಧುಗಳು, ಸ್ನೇಹಿತರ ವಿವರಗಳನ್ನು ಪೋಸ್ಟ್ ಮಾಡಬಹುದು ಮತ್ತು ಅವರ ಸ್ಥಿತಿಗತಿಗಳ ಬಗ್ಗೆ ಸರ್ಚ್ ಮಾಡಬಹುದು. 
 
ಈ ಅಪ್ಲಿಕೇಷನ್ ಎರಡು ಬಾಕ್ಸ್‌ಗಳನ್ನು ಹೊಂದಿದ್ದು, ಒಂದು ಬಾಕ್ಸ್‌ನಲ್ಲಿ " ಐ ಯಾಮ್ ಲುಕಿಂಗ್ ಫಾರ್ ಸಮ್ ಒನ್'' ಎಂದಿದೆ. ಎರಡನೇ ಬಾಕ್ಸ್‌ನಲ್ಲಿ 'ಐ ಹ್ಯಾವ್ ಇನ್ಫರ್ಮೇಷನ್ ಎಬೌಟ್ ಸಮ್ ಒನ್ '' ಎಂದಿದೆ. 
 
ಭೂಕಂಪದಲ್ಲಿ ಸಿಕ್ಕಿಬಿದ್ದ ಅಥವಾ ಕಳೆದುಹೋದ ಜನರಿಗಾಗಿ ''ಐ ಯಾಮ್ ಲುಕಿಂಗ್ ಫಾರ್ ಸಮ್ ಒನ್'' ಕ್ಲಿಕ್ ಮಾಡಿ ಅವರ ಹೆಸರನ್ನು ಟೈಪ್ ಮಾಡಬೇಕು.  ಅದೇ ರೀತಿ ವ್ಯಕ್ತಿಯೊಬ್ಬ ತಾನು ಸುರಕ್ಷಿತವಾಗಿದ್ದೇನೆಂದು  ತನ್ನ ಬಂಧುಗಳು ಅಥವಾ ಸ್ನೇಹಿತರು  ತಿಳಿಯಲು ಬಯಸಿದ್ದರೆ, ಅಥವಾ ಭೂಕಂಪ ಪೀಡಿತ ಪ್ರದೇಶದಲ್ಲಿ ಸಿಕ್ಕಿಬಿದ್ದವರಿಂದ ಮಾಹಿತಿ ಸಿಕ್ಕಿದ್ದರೆ ''ಐ ಹ್ಯಾವ್ ಇನ್ಫರ್ಮೇಶನ್ ಎಬೌಟ್ ಸಮ್ ಒನ್'' ಮಾಹಿತಿಯನ್ನು ಹಂಚಿಕೊಳ್ಳಬಹುದು. 

ವೆಬ್ದುನಿಯಾವನ್ನು ಓದಿ