ಕೇವಲ ರೂ.20ಕ್ಕೆ ಲೆಕ್ಕವಿಲ್ಲದಷ್ಟು ಸಿನಿಮಾ ನೋಡ್ಬೋದು!

ಸೋಮವಾರ, 26 ಡಿಸೆಂಬರ್ 2016 (12:11 IST)
ಕ್ರಿಸ್ಮಸ್ ಉಡುಗೊರೆಯಾಗಿ ಗೂಗಲ್ ಆಲ್‌ಲೈನ್ ಸ್ಟ್ರೀಮಿಂಗ್ ಸೇವೆಯಲ್ಲಿ ಒಂದು ಹೊಸ ಪ್ರಮೋಷನಲ್ ಆಫರನ್ನು ಗ್ರಾಹಕರ ಮುಂದೆ ತಂದಿದೆ. ಕೆವಲ ರೂ.20ಕ್ಕೆ ಪ್ಲೇ ಮೂವೀಸ್‌ನಲ್ಲಿ ಎಷ್ಟು ಬೇಕಾದರೂ ಸಿನಿಮಾಗಳನ್ನು ನೋಡುವ ಅವಕಾಶ ಕಲ್ಪಿಸಲಾಗಿದೆ.
 
ವಿಶೇಷ ಎಂದರೆ ಇತ್ತೀಚೆಗೆ ಬಾಕ್ಸ್ ಆಫೀಸಲ್ಲಿ ಸದ್ದು ಮಾಡಿದ, ಲೇಟೆಸ್ಟ್ ಚಿತ್ರಗಳು ಪಟ್ಟಿಯಲ್ಲಿವೆ. ಇವೆಲ್ಲವನ್ನೂ ಕೇವಲ ರೂ.20ಕ್ಕೆ ವೀಕ್ಷಿಸಬಹುದಾಗಿದೆ. ಜಾಸನ್ ಬೋರ್ನ್, ಸೂಸೈಡ್ ಸ್ಕ್ವಾಡ್, ಫೈಂಡಿಂಗ್ ಡೋರಿ, ಜಂಗಲ್ ಬುಕ್, ಸುಲ್ತಾನ್, ಎಕ್ಸ್ ಮ್ಯಾನ್, ಕ್ಯಾಪ್ಟನ್ ಅಮೆರಿಕಾ, ಸಿವಿಲ್ ವಾರ್, ಜ್ಯುಪಿಟರ್ ನಂತಹ ಹಲವಾರು ಚಿತ್ರಗಳು ಇಲ್ಲಿ ಲಭ್ಯ.
 
ಕ್ರಿಸ್ಮಸ್, ಹೊಸ ವರ್ಷದ ಆಫರ್‌ಗಾಗಿ ಈ ಸಿನಿಮಾಗಳನ್ನು ಅಂದೇ ವೀಕ್ಷಿಸಬೇಕೆಂಬ ನಿಯಮವೇನಿಲ್ಲ. ಈ ಕೊಡುಗೆ 2017ರ ಜನವರಿ 23ರವರೆಗೂ ಲಭ್ಯವಾಗಲಿದೆ ಎಂದು ಗೂಗಲ್ ತಿಳಿಸಿದೆ. ಮುಂದಿನ ದಿನಗಳಲ್ಲಿ ಕೇವಲ ರು.20ಕ್ಕೆ ಲೆಕ್ಕವಿಲ್ಲದಷ್ಟು ಸಿನಿಮಾಗಳನ್ನು ವೀಕ್ಷಿಸುವ ಅವಕಾಶ ಗೂಗಲ್ ಕಲ್ಪಿಸಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ