ನೌಕರ ಸ್ನೇಹಿ ಅತ್ಯುತ್ತಮ ಕಂಪನಿಗಳ ಪೈಕಿ ಗೂಗಲ್‌ಗೆ ಅಗ್ರಸ್ಥಾನ

ಮಂಗಳವಾರ, 13 ಅಕ್ಟೋಬರ್ 2015 (20:38 IST)
ಜಗತ್ತಿನಲ್ಲಿ   ಅತ್ಯುತ್ತಮ ಬಹುರಾಷ್ಟ್ರೀಯ ದುಡಿಮೆಯ ತಾಣಗಳ ಪಟ್ಟಿಯು ಅತ್ಯುತ್ತಮ ನೌಕರಸ್ನೇಹಿ ಬಹುರಾಷ್ಟ್ರೀಯ ಕಂಪನಿಗಳ ಪೈಕಿ ಗೂಗಲ್ ಅಗ್ರಸ್ಥಾನ ಅಲಂಕರಿಸಿದೆ.  ಸತತವಾಗಿ ಮೂರನೇ ವರ್ಷಕ್ಕೆ ಈ ಹೆಗ್ಗಳಿಕೆಗೆ ಗೂಗಲ್ ಕಂಪನಿ ಪಾತ್ರವಾಗಿದೆ. ಸಾಫ್ಟವೇರ್ ಡೆವಲಪರ್ ಎಸ್‌ಎಎಸ್ ಇನ್‌ಸ್ಟಿಟ್ಯೂಟ್ ಮತ್ತು ಉತ್ಪಾದನೆ ಸಂಸ್ಥೆ ಡಬ್ಲ್ಯು ಎಲ್ ಗೋರೆ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನವನ್ನು ಪಡೆದಿವೆ. 
 
ವಾರ್ಷಿಕ  ಜಗತ್ತಿನ ಅತ್ಯುತ್ತಮ ಬಹುರಾಷ್ಟ್ರೀಯ ಕಂಪನಿಗಳ ಪಟ್ಟಿಯು ಅಗ್ರ 25 ಜಾಗತಿಕ ನೌಕರ ಸ್ನೇಹಿ ಕಂಪನಿಗಳನ್ನು ಪಟ್ಟಿಮಾಡಿದೆ. ಅಗ್ರ ಐದರ ಪಟ್ಟಿಯಲ್ಲಿ ಡಾಟಾ ಸ್ಟೋರೇಜ್ ಸ್ಪೆಷಲಿಸ್ಟ್ ನೆಟ್‌ಆಪ್ ಮತ್ತು ಮೊಬೈಲ್ ಸಂಪರ್ಕ ಸೇವೆಯ ಟೆಲಿಫೋನಿಕಾ ನಾಲ್ಕು ಮತ್ತು ಐದನೇ ಸ್ಥಾನ ಪಡೆದಿವೆ.
 
ಇಎಂಸಿ ಕಾರ್ಪೊರೇಷನ್ 6ನೇ ಶ್ರೇಯಾಂಕ, ಅದರ ಬೆನ್ನಹಿಂದೆ ಸಾಫ್ಟ್‌ವೇರ್ ದೈತ್ಯ ಮೈಕ್ರೋಸಾಫ್ಟ್ ಏಳನೇ ಸ್ಥಾನ ಪಡೆದಿವೆ. 25 ಕಂಪನಿಗಳ ಪಟ್ಟಿಯಲ್ಲಿ ಭಾರತದ ಯಾವುದೇ ಕಂಪನಿಯು ಕಾಣಿಸಿಕೊಂಡಿಲ್ಲ. ಟಾಪ್ ಟೆನ್‌ನಲ್ಲಿ ಸೇರಿರುವ ಇತರೆ ಕಂಪನಿಗಳು ಬಿಬಿವಿಎ(8ನೇ ಸ್ಥಾನ), ಮೊಸಾಂಟೊ(9ನೇ ಸ್ಥಾನ) ಮತ್ತು ಅಮೆರಿಕನ್ ಎಕ್ಸ್‌ಪ್ರೆಸ್ (10ನೇ ಸ್ಥಾನ) ಪಡೆದಿವೆ. 
 
 

ವೆಬ್ದುನಿಯಾವನ್ನು ಓದಿ