ಷೇರುಪೇಟೆಯಲ್ಲಿ ಶೇ. 5 ಪಿಎಫ್ ಹಣ ಹೂಡಿಕೆಗೆ ಸರ್ಕಾರ ಅವಕಾಶ

ಶನಿವಾರ, 25 ಏಪ್ರಿಲ್ 2015 (16:34 IST)
ನೌಕರ ಭವಿಷ್ಯ ನಿಧಿ ಸಂಸ್ಥೆಯಿಂದ(ಇಪಿಎಪೇ್ಒ)  ಶೇ. 5ರಷ್ಟು ನಿಧಿಯನ್ನು ಎಕ್ಸ್‌ಚೇಂಜ್ ಟ್ರೇಡೆಡ್ ನಿಧಿಗಳಲ್ಲಿ (ಇಟಿಎಫ್) ಹೂಡಲು ಸರ್ಕಾರ ಅವಕಾಶ ನೀಡಿದೆ. ಇದರಿಂದ ಇದೇ ವಿತ್ತೀಯ ವರ್ಷದಲ್ಲಿ ಷೇರುಪೇಟೆಗಳಿಗೆ 5000 ಕೋಟಿ ರೂ. ಹರಿದುಬರಲಿದೆ. ಕಾರ್ಮಿಕ ಸಚಿವಾಲಯ ಇಪಿಎಫ್‌ಒಗೆ ನೂತನ ಬಂಡವಾಳ ನಮೂನೆಯನ್ನು  ನೋಟಿಫೈ ಮಾಡಿದೆ. ಇದರಿಂದ ಇಪಿಎಫ್‌ಒ ಇಟಿಎಫ್‌ನಲ್ಲಿ ಶೇ. 5ರಷ್ಟು ನಿಧಿಯನ್ನು ಹೂಡಿಕೆ ಮಾಡಬೇಕಾಗುತ್ತದೆ. 
 
ಅಂದಾಜಿನ ಪ್ರಕಾರ, ಇಪಿಎಫ್‌ಒ ಠೇವಣಿಗಳು 2014-15ರಲ್ಲಿ 80,000 ಕೋಟಿ ರೂ.ಗಳಾಗುತ್ತದೆ.  ಪ್ರಸಕ್ತ ವಿತ್ತೀಯ ವರ್ಷದಲ್ಲಿ ಇನ್‌ಕ್ರಿಮೆಂಟಲ್ ಠೇವಣಿಗಳು ಒಂದು ಲಕ್ಷ ಕೋಟಿ ರೂ.ಗಳಾಗಿದೆ ಎಂದು ಕಾರ್ಮಿಕ ಕಾರ್ಯದರ್ಶಿ ಶಂಕರ್ ಅಗರವಾಲ್ ಹೇಳಿದ್ದಾರೆ. ನಾವು ಮೊದಲಿಗೆ ಶೇ. 1ರಿಂದ ಆರಂಭಿಸಿ, ಈ ವಿತ್ತೀಯ ವರ್ಷದಲ್ಲಿ ಶೇ.5ರಷ್ಟು ಹೂಡಿಕೆ ಮಾಡುತ್ತೇವೆ. ಈ ಹಣಕಾಸಿನ ವರ್ಷದ ಕೊನೆಯಲ್ಲಿ ಇಪಿಎಫ್‌ಒ ಶೇ. 5ರಷ್ಟು ಅಂಕಿಅಂಶವನ್ನು ಮುಟ್ಟಬೇಕು ಎಂದು ನುಡಿದರು.
 
 ಹಣಕಾಸು ಸಚಿವಾಲಯವು ಈಕ್ವಿಟಿ ಮಾರುಕಟ್ಟೆಯಲ್ಲಿ ಶೇ. 5-15ರಷ್ಟು ನಿಧಿಯನ್ನು ಹೂಡಿಕೆ ಮಾಡಬೇಕೆಂದು ಸಲಹೆ ಮಾಡಿತ್ತು. ಆದರೆ ಭವಿಷ್ಯ ನಿಧಿ ನೌಕರರ ಕಷ್ಟ ಪಟ್ಟು ಸಂಪಾದಿಸಿದ ಹಣವಾದ್ದರಿಂದ ನಾವು ಆರೀತಿಯ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲ ಎಂದು ಅಗರವಾಲ್ ಹೇಳಿದರು. 

ವೆಬ್ದುನಿಯಾವನ್ನು ಓದಿ