ಮುಖಂಡರ ಜನ್ಮದಿನ, ಪುಣ್ಯತಿಥಿ ಜಾಹೀರಾತುಗಳಿಗೆ ಸರ್ಕಾರ ಕಡಿವಾಣ

ಶುಕ್ರವಾರ, 28 ನವೆಂಬರ್ 2014 (13:42 IST)
ಮಹಾತ್ಮ ಗಾಂಧಿ ಹೊರತುಪಡಿಸಿ ಯಾರದ್ದೇ ಹುಟ್ಟುಹಬ್ಬ ಅಥವಾ ಪುಣ್ಯತಿಥಿ ಅಂಗವಾಗಿ ಸಮಾರಂಭ ಆಯೋಜಿಸುವುದಿಲ್ಲ ಎಂದು ಸರ್ಕಾರ ನಿರ್ಧರಿಸಿದ ಬಳಿಕ ಇಂತಹ ಸಂದರ್ಭಗಳಲ್ಲಿ ಜಾಹೀರಾತುಗಳನ್ನು ನೀಡುವುದಕ್ಕೆ ಕುರಿತ ನೀತಿಯನ್ನು ಪುನರ್ಪರಿಶೀಲಿಸಲು ಸರ್ಕಾರ ಆರಂಭಿಸಿದೆ. 
 
ಎಲ್ಲಾ ಸಚಿವಾಲಯಗಳಿಗೆ ಕ್ಯಾಬಿನೆಟ್ ಕಾರ್ಯದರ್ಶಿ ಅಜಿತ್ ಕುಮಾರ್  ಸೇತ್  ಜಾಹೀರಾತು ನೀತಿಯ ಪುನರ್ಪರಿಶೀಲನೆಗೆ ಕೋರಿದ್ದಾರೆ. ಜನ್ಮದಿನ ಮತ್ತು ಪುಣ್ಯತಿಥಿ ವಾರ್ಷಿಕಗಳಿಗೆ ಜಾಹೀರಾತುಗಳನ್ನು ನೀಡಲು ಪ್ರಮುಖ ನಾಯಕರ ಪಟ್ಟಿಯನ್ನು ನೀಡುವಂತೆ ಗೃಹಸಚಿವಾಲಯ ತಿಳಿಸಿದೆ.  
 
ಅನೇಕ ಸರ್ಕಾರಿ ಸಚಿವಾಲಯಗಳು ಇಂದಿರಾಗಾಂಧಿ, ರಾಜೀವ್ ಗಾಂಧಿ, ಅಂಬೇಡ್ಕರ್, ಸರ್ದಾರ್ ಪಟೇಲ್, ಲಾಲ್ ಬಹಾದುರ್ ಶಾಸ್ತ್ರಿ, ಜವಾಹರಲಾಲ್ ನೆಹರು, ಚರಣ್ ಸಿಂಗ್, ಸ್ವಾಮಿ ವಿವೇಕಾನಂದ ಮುಂತಾದವರ ಜನ್ಮವಾರ್ಷಿಕಗಳ ಬಗ್ಗೆ  ಜಾಹೀರಾತುಗಳನ್ನು ಪ್ರತ್ಯೇಕವಾಗಿ ನೀಡುತ್ತವೆ. ಅನೇಕ ಮುಖಂಡರ ಪುಣ್ಯ ತಿಥಿಗಳ ಬಗ್ಗೆ ಕೂಡ ಜಾಹೀರಾತುಗಳನ್ನು ನೀಡಲಾಗುತ್ತದೆ. ಇದರಿಂದ ಸುದ್ದಿಪತ್ರಿಕೆಗಳಲ್ಲಿ ಗೊತ್ತಾದ ದಿನ ಅನೇಕ ಜಾಹೀರಾತುಗಳಿಂದ ತುಂಬುತ್ತದೆ.

ಯೋಜನೆಯ ಪ್ರಕಾರ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಗೊತ್ತಾದ ದಿನ ಏಕಮಾತ್ರ ಜಾಹೀರಾತು ನೀಡುತ್ತದೆ. ಆದರೆ ಸಾಮಾಜಿಕ ನ್ಯಾಯ ಸಚಿವಾಲಯ, ಕೃಷಿ ಸಚಿವಾಲಯ, ಗ್ರಾಮೀಣ ಅಭಿವೃದ್ದಿ ಸಚಿವಾಲಯ ಅಥವಾ ಯಾವುದೇ ಸರ್ಕಾರಿ ಪ್ರಾಯೋಜಿತ ಸಾರ್ವಜನಿಕ ವಲಯ ಘಟಕ ಜಾಹೀರಾತುಗಳನ್ನು ನೀಡಬಾರದು. ಅನೇಕ ಜಾಹೀರಾತುಗಳನ್ನು ನೀಡುವ ಪ್ರಸ್ತುತ ವ್ಯವಸ್ಥೆ ಅಣಕವಾಗಿದ್ದು, ಹಣದ ದುಂದುವೆಚ್ಚವಾಗುತ್ತದೆ ಎಂದು ಅಧಿಕಾರಿ ಹೇಳಿದರು. 

ವೆಬ್ದುನಿಯಾವನ್ನು ಓದಿ