25 ನಗರಗಳಲ್ಲಿ ವೇಗದ ವೈಫೈ ಸೇವೆಗೆ ಸರ್ಕಾರ ಚಿಂತನೆ

ಮಂಗಳವಾರ, 16 ಡಿಸೆಂಬರ್ 2014 (19:26 IST)
2 015ರ ಜೂನ್‍‌ನೊಳಗೆ 10ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯ 25 ನಗರಗಳ ಆಯ್ದ ಸಾರ್ವಜನಿಕ ಸ್ಥಳಗಳಲ್ಲಿ ವೇಗದ ವೈಫೈ ಸೇವೆಗಳನ್ನು ನೀಡುವುದಕ್ಕೆ ಸರ್ಕಾರ ಪರ್ಯಾಲೋಚಿಸುತ್ತಿದೆ. 25 ನಗರಗಳಲ್ಲಿ ವೇಗದ ವೈಫೈ ಸೇವೆಗಾಗಿ 3-4 ವೈಫೈ ಸೇವೆಯ ಕೇಂದ್ರಗಳನ್ನು ನಿಯೋಜಿಸಲು ಸರ್ಕಾರ ಯೋಜಿಸಿದೆ ಎಂದು ಅಧಿಕೃತ ಮೂಲ ತಿಳಿಸಿದೆ.

ಇದು ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಯೋಜನೆಯಾಗಿದ್ದು, ಒಂದು ದಶಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯ ನಗರಗಳಲ್ಲಿ ವೈಫೈ ಸೇವೆ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ. ಉಚಿತ ವೈಫೈ ಅವಕಾಶಕ್ಕಾಗಿ ಸರ್ಕಾರ ಪ್ರತ್ಯೇಕವಾಗಿ 25 ಪುರಾತತ್ವ ಸ್ಮಾರಕಗಳನ್ನು ಗುರುತಿಸಿದೆ ಎಂದು ಮೂಲ ತಿಳಿಸಿದೆ.

ಈ ಸ್ಮಾರಕಗಳು ಹುಮಾಯೂನ್ ಗೋಪುರ, ಕೆಂಪು ಕೋಟೆ, ದೆಹಲಿಯ ಕುತುಬ್ ಮಿನಾರ್ ಸಂಕೀರ್ಣ, ತಾಜ್ ಮಹಲ್, ಫತೇಪುರ್ ಸಿಕ್ರಿ ಮತ್ತು ಉತ್ತರಪ್ರದೇಶದ ಸಾರಾನಾಥ್, ಮಹಾಬಲಿಪುರದ ಶೋರ್ ದೇವಾಲಯ ಮುಂತಾದವು ಸೇರಿವೆ.ಇದರಿಂದ ವಿದೇಶಿ ಪ್ರವಾಸಿಗಳು ಕೂಡ ಸಂಪರ್ಕ ಹೊಂದಲು ಸಾಧ್ಯವಾಗುತ್ತದೆ. ಟೆಲಿಕಾಂ ಜಾಲಗಳಲ್ಲಿ ದಟ್ಟಣೆ ಹೊರೆಯನ್ನು ವೈಫೈ ತಗ್ಗಿಸುತ್ತದೆ ಎಂದು ಮೂಲ ತಿಳಿಸಿದೆ. 

ವೆಬ್ದುನಿಯಾವನ್ನು ಓದಿ