ಎಲ್‌ಪಿಜಿ ಸಬ್ಸಿಡಿಯಿಂದ 21000 ಕೋಟಿ ಉಳಿತಾಯ

ಗುರುವಾರ, 5 ಮೇ 2016 (18:33 IST)
ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಅಡುಗೆ ಅನಿಲ ಸಿಲಿಂಡರ್‌ ಸಬ್ಸಿಡಿ ಹಣವನ್ನು ಗ್ರಾಹಕರ ಖಾತೆಗೆ ನೇರವಾಗಿ ಪಾವತಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ 21 ಸಾವಿರ ಕೋಟಿ ಹಣ ಉಳಿತಾಯವಾಗಿದೆ.
ಅಡುಗೆ ಅನಿಲ ಸಿಲಿಂಡರ್‌ ಸಬ್ಸಿಡಿ ಹಣವನ್ನು 'ಡಿಬಿಟಿ' ಮೂಲಕ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ಪಾವತಿ ಮಾಡಲಾಗುತ್ತಿದೆ. ಇದರಿಂದ ನಕಲಿ ಸಬ್ಸಿಡಿ ಸಿಲಿಂಡರ್‌ ಸಂಪರ್ಕ ಮತ್ತು ಅಕ್ರಮ ಬಳಕೆಗೆ ಕಡಿವಾನ ಹಾಕಲು ಸಾಧ್ಯವಾಗಿದೆ ಎಂದು ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ.
 
2014-2015 ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ, 2015-16 ರ ಸಾಲಿನಲ್ಲಿ ಸಬ್ಸಿಡಿ ಹಣ 14,672 ಕೋಟಿಯಿಂದ 7,000 ಕೋಟಿಗೆ ಇಳಿಕೆಯಾಗಿದ್ದು, ಈ ಸಾಲಿನಲ್ಲಿ 16,056 ಕೋಟಿ ಸಬ್ಸಿಡಿ ಹಣವನ್ನು ನೀಡಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ