ಕಪ್ಪುಹಣವಿರುವುದಾಗಿ ಘೋಷಣೆ ಮಾಡಿಕೊಂಡ 638 ಜನ

ಗುರುವಾರ, 1 ಅಕ್ಟೋಬರ್ 2015 (17:49 IST)
ಒನ್ ಟೈಂ ಕಂಪ್ಲಯನ್ಸ್' ವಿಂಡೋ  ಅಡಿ ದೇಶದ 638 ಜನರಿಂದ ಈವರೆಗೆ 3,770 ಕೋಟಿ ಕಪ್ಪು ಹಣವನ್ನು ಸಂಗ್ರಹಿಸಿರುವುದಾಗಿ ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.

ಕಪ್ಪು ಹಣ ಘೋಷಿಸಿಕೊಳ್ಳಲು ನಿನ್ನೆ ಕೊನೆಯ ದಿನವಾದ್ದರಿಂದ ಆದಾಯ ತೆರಿಗೆ ಇಲಾಖೆಯಲ್ಲಿ ಅಪಾರ ಜನಸಂದಣಿ ಇತ್ತು. ರಾಜಸ್ಥಾನ, ಕರ್ನಾಟಕ, ದೆಹಲಿ, ಉತ್ತರ ಪ್ರದೇಶ್ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಹಲವರು ಕಪ್ಪು ಹಣವಿರುವುದಾಗಿ ಘೋಷಿಸಿಕೊಂಡಿದ್ದಾರೆ.
 
ದೇಶದ 638 ಜನರು ತಾವು ಹೊಂದಿರುವ ಕಪ್ಪು ಹಣದ ವಿವರವನ್ನು ಘೋಷಿಸಲು ಮುಂದೆ ಬಂದಿದ್ದಾರೆ. ಇಂತವರು ತೆರಿಗೆ ಹಾಗೂ ದಂಡ ಪಾವತಿ ಮಾಡಲು 2015 ರ ಡಿಸೆಂಬರ್ 31 ವರೆಗೆ ಕಾಲಾವಕಾಶ ಇದೆ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಅಧ್ಯಕ್ಷ ಅನಿತಾ ಕಪೂರ್ ಸ್ಪಷ್ಟಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ