ಆದಾಯ ತೆರಿಗೆ ವಿವರದ ಫಾರಂ ಸರಳೀಕರಣಕ್ಕೆ ಸರ್ಕಾರ ನಿರ್ಧಾರ

ಮಂಗಳವಾರ, 28 ಏಪ್ರಿಲ್ 2015 (12:52 IST)
ವಿವಾದಾತ್ಮಕ ಆದಾಯ ತೆರಿಗೆ ವಿವರದ ನಮೂನೆಯನ್ನು ಪರಿಷ್ಕರಿಸಲು ಸರ್ಕಾರ ಕಾರ್ಯೋನ್ಮುಖವಾಗಿದೆ. ವಿದೇಶಿ ಪ್ರವಾಸಗಳಲ್ಲಿ ವೈಯಕ್ತಿಕ ವೆಚ್ಚ ಮತ್ತು ಸ್ಥಳೀಯ ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿಯನ್ನು ನಮೂನೆಯಲ್ಲಿ ಕೇಳಿದ್ದರಿಂದ ವಿವಾದಕ್ಕೆ ಗುರಿಯಾಗಿತ್ತು. ಈ ಫಾರಂ ಸರಳೀಕರಣಗೊಳಿಸಲಾಗಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿ ತಿಳಿಸಿದ್ದು, ಮತ್ತಷ್ಟು ವಿವರಗಳನ್ನು ಬಹಿರಂಗ ಮಾಡಲು ನಿರಾಕರಿಸಿದರು.  ಹೊಸ ಫಾರಂಗಳನ್ನು ಮುಂದಿನ ಕೆಲವು ವಾರಗಳಲ್ಲಿ ಬಿಡುಗಡೆ ಮಾಡಬಹುದು ಎಂದು ಮೂಲಗಳು ಹೇಳಿವೆ. 
 
ವಿದೇಶಿ ಪ್ರವಾಸ ಸಂಬಂಧಿತ ವಿವರಗಳು ಅತ್ಯಂತ ವಿವಾದಾತ್ಮಕ ಅಂಶವಾಗಿದ್ದು, ಸರ್ಕಾರದ ಸರಳೀಕರಣ ಪ್ರಕ್ರಿಯೆಯಲ್ಲಿ ಈ ವಿವಾದವನ್ನು ನಿವಾರಿಸುವ ಸಾಧ್ಯತೆಯಿದೆ.
ಕಳೆದ ವಾರ ಅಮೆರಿಕದಿಂದ ಅರುಣ್ ಜೇಟ್ಲಿ ಹಿಂತಿರುಗಿದ ಬಳಿಕ ನಡೆಸಿದ ಸಮಾಲೋಚನೆಗಳ ಬೆನ್ನಹಿಂದೆ ಫಾರಂ ಸರಳೀಕರಿಸುವ ನಿರ್ಧಾರ ಕೈಗೊಳ್ಳಲಾಯಿತು. 
 
 ಸಚಿವರ ಗೈರಿನಲ್ಲಿ ತೆರಿಗೆ ಇಲಾಖೆ ಈ ಫಾರಂ ಬಿಡುಗಡೆ ಮಾಡಿದ್ದು ಕೋಲಾಹಲಕ್ಕೆ ಕಾರಣವಾದ್ದರಿಂದ ಜೇಟ್ಲಿ ಅದನ್ನು ತಡೆಹಿಡಿಯುವಂತೆ ಅಧಿಕಾರಿಗಳಿಗೆ ಆದೇಶ ನೀಡಿದರು.  
 

ವೆಬ್ದುನಿಯಾವನ್ನು ಓದಿ