ಹೊಸ ಆದಾಯ ಹಂಚಿಕೆ : 69 ತೈಲ, ಅನಿಲ ನಿಕ್ಷೇಪಗಳ ಹರಾಜು

ಬುಧವಾರ, 2 ಸೆಪ್ಟಂಬರ್ 2015 (21:22 IST)
ಸರ್ಕಾರವು ಒಎನ್‌ಜಿಸಿ ಮತ್ತು ಆಯಿಲ್ ಇಂಡಿಯಾದ 69 ನಿರರ್ಥಕ ತೈಲ ಮತ್ತು ಅನಿಲ ನಿಕ್ಷೇಪಗಳನ್ನು ಖಾಸಗಿ ಸಂಸ್ಥೆಗಳಿಗೆ ಹೊಸ ಆದಾಯ ಹಂಚಿಕೆ ಮಾದರಿಯಲ್ಲಿ ಹರಾಜು ಹಾಕಲಿದೆ. 89 ದಶಲಕ್ಷ ಟನ್ ತೈಲ ಮತ್ತು ಅನಿಲ ಸಂಪನ್ಮೂಲಗಳ, ಪ್ರಸಕ್ತ ದರದಲ್ಲಿ 70,000 ಕೋಟಿ ರೂ. ಮೌಲ್ಯದ  69 ಸಣ್ಣ ಮತ್ತು ಮಧ್ಯಮ ಪ್ರಮಾಣದ ನಿಕ್ಷೇಪಗಳನ್ನು ಶೋಧಕರಿಗೆ ನೀಡಲಾಗುತ್ತದೆ.
 
ವಿವಾದಾತ್ಮಕ ಉತ್ಪಾದನೆ ಹಂಚಿಕೆ ಗುತ್ತಿಗೆ ಮತ್ತು ವೆಚ್ಚ ವಸೂಲಿ ಮಾದರಿಯಿಂದ ಆದಾಯ ಹಂಚಿಕೆ ಮಾದರಿಗೆ ಸ್ಥಳಾಂತರವಾಗಿದ್ದು ಸರ್ಕಾರದ ಹಿತಾಸಕ್ತಿ ರಕ್ಷಣೆ ಮಾಡುತ್ತದೆ ಎಂದು ತೈಲ ಖಾತೆ ಸಚಿವ ಧರ್ಮೇಂದ್ರ ಪ್ರದಾನ್ ಹೇಳಿದ್ದಾರೆ. 
 
ನಾವು ಪ್ರಧಾನಿಯ ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ ಧ್ಯೇಯಕ್ಕೆ ಬದ್ಧರಾಗಿದ್ದೇವೆ. ಹೊಸ ಮಾದರಿಯು ನಿರ್ವಹಣೆಯಲ್ಲಿ ಸರ್ಕಾರದ ಕನಿಷ್ಟ ಮಧ್ಯಪ್ರವೇಶಿಸುವ ಖಾತರಿ ನೀಡುತ್ತದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ