ಗ್ರೀಸ್‌ನಲ್ಲಿ ಆರ್ಥಿಕ ಸಂಕಷ್ಟ: ಒಂದು ವಾರದವರೆಗೆ ಬ್ಯಾಂಕ್‌ಗಳು ಬಂದ್

ಸೋಮವಾರ, 29 ಜೂನ್ 2015 (16:27 IST)
ಸ್ ಗ್ರೀಸ್ ಭಾನುವಾರ ತನ್ನ ಆರ್ಥಿಕ ದುಸ್ಥಿತಿಯ ದುಷ್ಪರಿಣಾಮವನ್ನು ತಡೆಯಲು ಬ್ಯಾಂಕ್‌ಗಳನ್ನು ಮುಚ್ಚಿದೆ ಮತ್ತು ಬಂಡವಾಳ ನಿಯಂತ್ರಣಗಳನ್ನು ಹೇರಿದೆ. ಎಡಪಂಥೀಯ ಸರ್ಕಾರ ಮತ್ತು ವಿದೇಶಿ ಸಾಲಗಾರರ ನಡುವೆ  ಬೇಲ್ ಔಟ್ ಮಾತುಕಥೆ ಮುರಿದುಬಿದ್ದ ನಂತರ, ಐರೋಪ್ಯ ಕೇಂದ್ರೀಯ ಬ್ಯಾಂಕ್ ಗ್ರೀಸ್ ಬ್ಯಾಂಕ್‌ಗಳಿಗೆ ಮುಖ್ಯ ಆರ್ಥಿಕನೆರವಿನ ಬೆಂಬಲ ಸ್ಥಗಿತಗೊಳಿಸಿತು. ಇದರಿಂದಾಗಿ  ಗ್ರೀಸ್‌ಗೆ ಬ್ಯಾಂಕ್‌‍ಗಳ ಕುಸಿತವನ್ನು ತಡೆಯುವುದಕ್ಕೆ ಮುಚ್ಚದೇ ಬೇರೆ ದಾರಿಇರಲಿಲ್ಲ.
 
ಇಡೀ ವಾರ ಬ್ಯಾಂಕ್‌ಗಳನ್ನು ಮತ್ತು ಷೇರುಮಾರುಕಟ್ಟೆಗಳನ್ನು ಮುಚ್ಚಲಾಗುತ್ತದೆ. ಎಟಿಎಂಗಳಿಂದ ದಿನಕ್ಕೆ 60 ಯೂರೋ ನಗದನ್ನು ಮಾತ್ರ ತೆಗೆಯಲು ಸಾಧ್ಯವಾಗುತ್ತದೆ. ಜನರ ಪೆಟ್ರೋಲ್ ಬಂಕ್‌ಗಳಲ್ಲಿ ಮತ್ತು ಎಟಿಎಂ ಯಂತ್ರಗಳಲ್ಲಿ ಹಣ ತೆಗೆಯಲು ಸಾಲುಗಟ್ಟಿ ನಿಂತರ ಜನರ ಸಾಲು ಗ್ರೀಕರು ಎದುರಿಸುತ್ತಿರುವ ಹಾನಿಯ ಪ್ರಮಾಣವನ್ನು ಬಿಂಬಿಸುತ್ತಿದೆ.

ಸಾಲಗಾರರ ಜೊತೆ ಗ್ರೀಸ್ ಒಪ್ಪಂದದ ವೈಫಲ್ಯದಿಂದ  ಐಎಂಎಫ್‌ನಿಂದ 1.6 ಟ್ರಿಲಿಯನ್ ಯೂರೋ ಸಾಲಗಳು ಮಂಗಳವಾರ ಬಾಕಿವುಳಿದಿದೆ. ಮುಂಬರುವ ತಿಂಗಳಲ್ಲಿ ಅಥೆನ್ಸ್ ಬಿಲಿಯಾಂತರ ಯೂರೋ ಹಣವನ್ನು ಐರೋಪ್ಯ ಕೇಂದ್ರ ಬ್ಯಾಂಕ್‌ಗೆ ಹಿಂತಿರುಗಿಸಬೇಕಿದೆ.
 

ವೆಬ್ದುನಿಯಾವನ್ನು ಓದಿ