ಜನಮತ ಸಂಗ್ರಹದಲ್ಲಿ ಮಿತವ್ಯಯದ ಷರತ್ತುಗಳನ್ನು ನಿರಾಕರಿಸಿದ ಗ್ರೀಸ್ ಜನರು

ಸೋಮವಾರ, 6 ಜುಲೈ 2015 (15:46 IST)
ಗ್ರೀಕ್ ಜನರು ಜನಮತ ಗಣನೆಯಲ್ಲಿ ಸಾಲ ನೀಡಿಕೆ ಷರತ್ತುಗಳಿಗೆ ''ನೋ'' ಎಂದು ಮತಚಲಾಯಿಸಿದೆ. ಅರ್ಧದಷ್ಟು ಮತಗಳನ್ನು ಎಣಿಕೆಮಾಡಿದ್ದು, ಅಧಿಕೃತ ಅಂಕಿಅಂಶಗಳಲ್ಲಿ  ಶೇ. 61 ಗ್ರೀಕರು ಬೇಲ್ ಔಟ್ ಆಫರ್ ತಿರಸ್ಕರಿಸಿದ್ದನ್ನು ತೋರಿಸಿದೆ. 
 
ಅಚ್ಚರಿಯ ನೋ ಶಿಬಿರದ ಜಯದಿಂದ ಜನಮತಗಣನೆಯ ಭವಿಷ್ಯ ತಲೆಕೆಳಗಾಗಿದೆ. ಇದರಿಂದ ಗ್ರೀಸ್ ದೇಶವನ್ನು ಯೂರೋ ವಲಯದಲ್ಲಿ  ಹಣಕಾಸು ಮತ್ತು ರಾಜಕೀಯ ಒಂಟಿತನಕ್ಕೆ ದೂಡಿದ್ದು, ಸಾಲದಾತರು ಮತ್ತಷ್ಟು ನೆರವು ನೀಡಲು ನಿರಾಕರಿಸಿದರೆ ಬ್ಯಾಂಕಿಂಗ್ ವ್ಯವಸ್ಥೆ ಪತನಗೊಳ್ಳುತ್ತದೆ.  ಆದರೆ ಮಿಲಿಯಾಂತರ ಗ್ರೀಕರಿಗೆ ಮಾತ್ರ ಈ ಫಲಿತಾಂಶವು ಸಾಲದಾತರಿಗೆ, ಗ್ರೀಸರು ಮಿತವ್ಯಯ ಷರತ್ತುಗಳನ್ನು ಒಪ್ಪುವುದಿಲ್ಲ ಎಂಬ ಆಕ್ರೋಶದ ಸಂದೇಶವಾಗಿದೆ
ನೂರಾರು ಗ್ರೀಕರು ಗೆಲುವಿನ ಸಂಭ್ರಮಾಚರಣೆಗೆ ಕೇಂದ್ರ ಸಿಂಟಾಗ್ಮಾ ಚೌಕಕ್ಕೆ ಹರಿದುಬರಲಾರಂಭಿಸಿದ್ದಾರೆ. ಗ್ರೀಕ್ ಹಣಕಾಸು ವ್ಯವಸ್ಥೆ ಕುಸಿಯುವುದನ್ನು ತಪ್ಪಿಸಲು ಬ್ಯಾಂಕ್‌ಗಳನ್ನು ಮುಚ್ಚಲಾಗಿತ್ತು ಮತ್ತು ನಗದು ವಾಪಸಾತಿಯನ್ನು ತಗ್ಗಿಸಲಾಗಿತ್ತು.
 
ಮಿತವ್ಯಯದ ಷರತ್ತನ್ನು ಒಪ್ಪಬೇಕೋ, ಬೇಡವೋ ಎಂಬುದನ್ನು ಗ್ರೀಸ್‌ ಜನರೇ ನಿರ್ಧರಿಸಲಿದ್ದಾರೆ ಎಂದಿದ್ದ ಪ್ರಧಾನಿ ಸಿಪ್ರಾಸ್‌,  ಕಳೆದ ಭಾನುವಾರ ಜನಮತ ಸಂಗ್ರಹದ ಘೋಷಣೆ ಮಾಡುವ ಮೂಲಕ ಮಿತವ್ಯಯದ ವಿರುದ್ಧ ಮತ ಚಲಾಯಿಸುವಂತೆ ಜನರಿಗೆ ಕರೆ ನೀಡಿದ್ದರು.

ವೆಬ್ದುನಿಯಾವನ್ನು ಓದಿ