10,000 ಕೋಟಿ ಬಂಡವಾಳ ಸಂಗ್ರಹಿಸಲು ಎಚ್‌ಡಿಎಫ್‌ಸಿಗೆ ಎಫ್‌ಐಪಿಬಿ ಅನುಮತಿ

ಶನಿವಾರ, 20 ಡಿಸೆಂಬರ್ 2014 (14:42 IST)
10,000 ಕೋಟಿ ರೂ. ಬಂಡವಾಳ ಸಂಗ್ರಹಿಸುವ ಎಚ್‌ಡಿಎಫ್‌ಸಿ ಪ್ರಸ್ತಾವನೆಗೆ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ ಅನುಮತಿ ನೀಡಿದೆ. ತನ್ನ ಬಂಡವಾಳ ಹೆಚ್ಚಳಕ್ಕೆ ಎಚ್‌ಡಿಎಫ್‌ಸಿ ಹಲವಾರು ತಿಂಗಳಿಂದ ನಡೆಸುತ್ತಿದ್ದ ಹೆಣಗಾಟಕ್ಕೆ ತೆರೆಬಿದ್ದಿದೆ.

ಈ ವರ್ಷದ ಮೇನಲ್ಲಿ ಶೇರುದಾರರು ಸಾರ್ವಜನಿಕ ಅಥವಾ ಖಾಸಗಿ ಕ್ಷೇತ್ರಗಳ ಮೂಲಕ ಅಥವಾ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆ ಮಾರ್ಗಗಳ ಮೂಲಕ 10,000 ಕೋಟಿ ರೂ.ಗಳನ್ನು ಸಂಗ್ರಹಿಸಲು ಅವಕಾಶ ನೀಡಿದ್ದಾರೆ.

ಸಾಗರೋತ್ತರ ನಿಧಿ ಸಂಗ್ರಹಿಸುವ ಅದರ ಪ್ರಯತ್ನಗಳು ವಿಫಲವಾಗಿದ್ದವು. ಮಾತೃ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಬಂಡವಾಳ ಹೂಡಿಕೆ ವಿದೇಶಿ ಎಂಬ ನಿಯಮದಡಿ ಅದನ್ನು ರದ್ದುಮಾಡಲಾಗಿತ್ತು. ಎಚ್‌ಡಿಎಫ್‌ಸಿ ಬ್ಯಾಂಕ್ ಪ್ರಸ್ತಾವನೆಯು ಈಗ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಮುಂದೆ ಹೋಗುತ್ತದೆ. ಅದು 1200 ಕೋಟಿಯನ್ನು ಮೀರಿರುವ ಎಲ್ಲಾ ಹೂಡಿಕೆ ಪ್ರಸ್ತಾವನೆಗಳನ್ನು ಪರೀಕ್ಷಿಸುತ್ತದೆ. ಕಳೆದ ವರ್ಷ ಎಚ್‌ಡಿಎಫ್‌ಸಿ ಎಫ್‌ಐಬಿಪಿಯನ್ನು ಸಂಪರ್ಕಿಸಿ, ಶೇ.49ರಿಂದ ಶೇ. 67.55ರಷ್ಟು ವಿದೇಶಿ ಹೂಡಿಕೆಯನ್ನು ಹೆಚ್ಚಿಸಬೇಕೆಂದು ಕೋರಿತ್ತು.

ವೆಬ್ದುನಿಯಾವನ್ನು ಓದಿ