ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಬಡ್ಡಿದರ ಕಡಿತ, ಇಎಂಐ ಇಳಿಮುಖ ಸಾಧ್ಯತೆ

ಸೋಮವಾರ, 31 ಆಗಸ್ಟ್ 2015 (18:44 IST)
ಖಾಸಗಿ ಬ್ಯಾಂಕ್ ಎಚ್‌ಡಿಎಫ್‌ಸಿ ಮೂಲದ ದರ ಅಥವಾ ಕನಿಷ್ಟ ಸಾಲ ದರವನ್ನು ಶೇ. 9.70ರಿಂದ ಶೇ. 9.35ಕ್ಕೆ ಸೋಮವಾರ ಕಡಿತ ಮಾಡುವ ಮೂಲಕ ಗ್ರಾಹಕರಿಗೆ ಭಾರೀ ಪರಿಹಾರ ನೀಡಿದೆ. ಅಚ್ಚರಿಯ ದರ ಕಡಿತದಿಂದ ಇತರೆ ಅನೇಕ ಬ್ಯಾಂಕ್‌ಗಳು ತಮ್ಮ ದರ ಕಡಿತ ಮಾಡುವ ಸಂಭವವಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಐಸಿಐಸಿಐ ಬ್ಯಾಂಕ್ ಮತ್ತು ಸ್ಟೇಟ್ ಆಫ್ ಇಂಡಿಯಾ ಜತೆ ಪೈಪೋಟಿಗಳಿದಿದೆ. ಇವೆರಡೂ ಬ್ಯಾಂಕ್‌ಗಳು ಶೇ. 9.7ರ ಬಡ್ಡಿದರದಲ್ಲಿ ಸಾಲಗಳನ್ನು ವಿತರಿಸುತ್ತಿದ್ದವು. 
 
ಪರಿಷ್ಕೃತ ದರವು ಮಂಗಳವಾರದಿಂದ ಅನ್ವಯವಾಗುತ್ತದೆ. ಅದಾದ ಬಳಿಕ ಮೂಲ ದರಕ್ಕೆ ಕೊಂಡಿಯಾದ ಎಲ್ಲಾ ಸಾಲಗಳು ಅಗ್ಗವಾಗುತ್ತವೆ. ಬಡ್ಡಿದರಗಳಲ್ಲಿ ಕಡಿತದಿಂದ ವಾಹನ ಮತ್ತು ಗೃಹಸಾಲಗಳಲ್ಲಿ ಬೇಡಿಕೆಯನ್ನು ಏರಿಸಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ