ಗೃಹಸಾಲದ ದರವನ್ನು ಶೇ. 9.9ಕ್ಕೆ ಕಡಿತ ಮಾಡಿದ ಎಚ್‌ಡಿಎಫ್‌ಸಿ

ಶನಿವಾರ, 11 ಏಪ್ರಿಲ್ 2015 (11:05 IST)
ದೇಶದ ಅತಿ ದೊಡ್ಡ ಗೃಹಸಾಲ ಕಂಪನಿ ಎಚ್‌ಡಿಎಎಫ್‌ಸಿ ಲಿ. ಏಪ್ರಿಲ್ 13ರಿಂದ ಸಾಲದ ದರವನ್ನು 20 ಮೂಲಾಂಕಗಳಿಗೆ ಕಡಿತಗೊಳಿಸಿದೆ. ಈ ಕಡಿತದಿಂದಾಗಿ ಬ್ಯಾಂಕ್ ಶೇ. 9.9 ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ. ಇದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡುವ ಸಾಲಕ್ಕಿಂತ ಕಡಿಮೆಯಾಗಿದೆ.
 
ಬಡ್ಡಿದರದಲ್ಲಿ ಕಡಿತದಿಂದಾಗಿ 50 ಲಕ್ಷ ಸಾಲಕ್ಕೆ( 20 ವರ್ಷಗಳ ಅವಧಿ) ಸಮಾನ ಮಾಸಿಕ ಕಂತು ರೂ. 663 ಕಡಿಮೆಯಾಗುತ್ತದೆ. ಮುಂಚಿನ ದರದಲ್ಲಿ ಮಾಸಿಕ ಕಂತು 48583 ರೂ.ಗಳಿದ್ದದ್ದು 47, 920ರೂ.ಗೆ ಕಡಿತಗೊಳ್ಳುತ್ತದೆ. 
 
ಈ ಕಡಿತವು ಎಲ್ಲಾ ಗ್ರಾಹಕರಿಗೆ ಅನುಕೂಲವಾಗಲಿದ್ದು , ಪ್ರಸಕ್ತ ಸಾಲಗಾರರಿಗೆ ಕೂಡ ಬಡ್ಡಿ ವೆಚ್ಚವು ಇಳಿಮುಖವಾಗುತ್ತದೆ. ದೇಶದ ಅತೀ ದೊಡ್ಡ ಬ್ಯಾಂಕ್ ಎಸ್‌ಬಿಐ ಮಹಿಳೆಯರಿಗೆ ಗೃಹಸಾಲಕ್ಕೆ ಶೇ. 9.95 ಬಡ್ಡಿ ವಿಧಿಸಿದರೆ, ಇನ್ನಿತರ ಸಾಲಗಾರರಿಗೆ ಶೇ. 10ರಷ್ಟು ಬಡ್ಡಿ ವಿಧಿಸುತ್ತದೆ. 
 
ನಿಧಿಗಳ ವೆಚ್ಚದಲ್ಲಿ ಕಡಿತದ ಫಲವಾಗಿ ಸಾಲದ ದರದಲ್ಲಿ ಕಡಿತವುಂಟಾಗಿದೆ ಎಂದು ಎಚ್‌ಡಿಎಫ್‌ಸಿಯ ಉಪಾಧ್ಯಕ್ಷ ಮತ್ತು ಸಿಇಒ ಕೇಕಿ ಮಿಸ್ತ್ರಿ ಹೇಳಿದರು. 

ವೆಬ್ದುನಿಯಾವನ್ನು ಓದಿ