ಎಚ್‌ಡಿಎಫ್‌ಸಿ ನಿವ್ವಳ ಲಾಭ ಶೇ. 11.5ರಷ್ಟು ಏರಿಕೆ

ಶುಕ್ರವಾರ, 30 ಜನವರಿ 2015 (14:09 IST)
ಪ್ರತಿಷ್ಠಿತ ಖಾಸಗಿ ಬ್ಯಾಂಕ್ ಎಚ್‌ಡಿಎಫ್‌ಸಿ ನಿವ್ವಳ ಲಾಭ 11.5ರಷ್ಟು ಏರಿಕೆಯಾಗಿ ಡಿಸೆಂಬರ್ ತ್ರೈಮಾಸಿಕದಲ್ಲಿ 1425 ರೂಗೆ ಮುಟ್ಟಿದೆ. ಭಾರತದ ಅತೀ ದೊಡ್ಡ ಅಡಮಾನ ಸಾಲ ಸಂಸ್ಥೆ ಎಚ್‌ಡಿಎಫ್‌ಸಿ ತನ್ನ ಒಟ್ಟು ಆದಾಯದಲ್ಲಿ ಶೇ.14ರಷ್ಟು ಹೆಚ್ಚಳವನ್ನು ಕಂಡಿದ್ದು, ಡಿಸೆಂಬರ್ ತ್ರೈಮಾಸಿಕದಲ್ಲಿ 6821 ಕೋಟಿ ರೂ.ಗಳಿಗೆ ಮುಟ್ಟಿದೆ.

ಎಚ್‌ಡಿಎಫ್‌ಸಿ ಒಟ್ಟು ಸಾಲ ಶೇ. 14.4ಕ್ಕೆ ಏರಿಕೆಯಾಗಿದ್ದು, 2,19, 951 ಕೋಟಿ ಡಿಸೆಂಬರ್ ತ್ರೈಮಾಸಿಕದಲ್ಲಿ ತಲುಪಿದೆ.

ನಿವ್ವಳ ಬಡ್ಡಿ ಅಂತರ ಅಥವಾ ಹಣಕಾಸು ಸಂಗ್ರಹಕ್ಕೆ ನೀಡಿದ ಬಡ್ಡಿ ಮತ್ತು ಸಾಲಗಳಿಂದ ಗಳಿಸಿದ ಬಡ್ಡಿಯ ನಡುವಿನ ಅಂತರ  6 ಮೂಲಾಂಶಗಳಿಗೆ ಕುಸಿದು ಶೇ. 3.93ಕ್ಕೆ ಮುಟ್ಟಿದೆ.

ವೆಬ್ದುನಿಯಾವನ್ನು ಓದಿ