30 ಲಕ್ಷದವರೆಗಿನ ಮೌಲ್ಯದ ಆಸ್ತಿಗಳಿಗೆ ಶೇ. 90ರಷ್ಟು ಗೃಹಸಾಲ

ಗುರುವಾರ, 8 ಅಕ್ಟೋಬರ್ 2015 (20:47 IST)
30ಲಕ್ಷ ಅಥವಾ ಅದಕ್ಕಿಂತ ಕಡಿಮೆ ಮೌಲ್ಯದ ಆಸ್ತಿಗಳಿಗೆ ಶೇ. 90ರಷ್ಟು ಗೃಹಸಾಲ ನೀಡಲು ಬ್ಯಾಂಕ್‌ಗಳಿಗೆ ಈಗ ಅವಕಾಶವಿದೆ ಎಂದು ರಿಸರ್ವ್ ಬ್ಯಾಂಕ್ ಗುರುವಾರ ತಿಳಿಸಿದೆ. 
 
ಇದಕ್ಕೆ ಮುಂಚೆ 20 ಲಕ್ಷ ರೂ.ಗಳವರೆಗೆ ಮಾತ್ರ ಶೇ. 90 ಸಾಲವನ್ನು ನೀಡಲು ಅವಕಾಶವಿತ್ತು.  ಇದರಿಂದಾಗಿ 20-30 ಲಕ್ಷ ನಡುವಿನ ಆಸ್ತಿಗಳನ್ನು ಖರೀದಿಸುವ ಗೃಹ ಆಕಾಂಕ್ಷಿಗಳಿಗೆ ಅನುಕೂಲವಾಗುತ್ತದೆ. ಎಲ್ಲಾ ಪ್ರಮುಖ ಬ್ಯಾಂಕ್‌ಗಳು ಗೃಹಸಾಲಗಳ ಮೇಲಿನ ಬಡ್ಡಿದರವನ್ನು ಕಡಿತ ಮಾಡಿರುವುದರಿಂದ ಆರ್‌ಬಿಐ ಈ ನಿರ್ಧಾರ ತೆಗೆದುಕೊಂಡಿದೆ. 
 
 ವೈಯಕ್ತಿಕ ಗೃಹಸಾಲಗಳು 30 ಲಕ್ಷ ವಿಭಾಗದಲ್ಲಿದ್ದರೆ, ಎಲ್‌ಟಿವಿ ಅನುಪಾತವು ಶೇ. 90ರಷ್ಟಿರುತ್ತದೆ ಎಂದು ರಿಸರ್ವ್ ಬ್ಯಾಂಕ್ ಸುತ್ತೋಲೆಯಲ್ಲಿ ತಿಳಿಸಿದೆ. 30 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿಗಳಿಗೆ ಮತ್ತು 75 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಆಸ್ತಿಗಳಿಗೆ ಎಲ್‌ಟಿವಿ ಶೇ. 80ರಷ್ಟಿರುತ್ತದೆ. 75ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿಗಳಿಗೆ ಅನುಪಾತವು ಶೇ. 75ರಷ್ಟಿರುತ್ತದೆ. 
 

ವೆಬ್ದುನಿಯಾವನ್ನು ಓದಿ