ಹೊಸ ಆವೃತ್ತಿಯ ಡಿಯೊ ಮಾರುಕಟ್ಟೆಗೆ ಬಿಡುಗಡೆ

ಮಂಗಳವಾರ, 3 ಮೇ 2016 (18:56 IST)
ಭಾರತದ ಮಾರುಕಟ್ಟೆಯಲ್ಲಿ ಹತ್ತು ದಶ ಲಕ್ಷಕ್ಕೂ ಹೆಚ್ಚು ಡಿಯೊ ದ್ವಿಚಕ್ರ ವಾಹನ ಮಾರಾಟವಾಗಿದ್ದು, ಇದೀಗ ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಸಂಸ್ಥೆ, ಮ್ಯಾಟ್ ಆಕ್ಸಿಸ್ ಗ್ರೇ ಬಣ್ಣ ಮತ್ತು ಪ್ರೀಮಿಯಂ 3ಡಿ ಲಾಂಛನ ಹೊಂದಿರುವ ಹೊಸ ಆವೃತ್ತಿಯ ಡಿಯೊ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಆವೃತ್ತಿಯ ವಾಹನಗಳು ದೆಹಲಿ ಶೋರೂಮ್ ದರ ಹೊರತು ಪಡಿಸಿ 48,264 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ.
ಈ ಹೊಸ ಆವೃತ್ತಿಯ ಡಿಯೊ 110 ಸಿಸಿ ಸಾಮರ್ಥ್ಯ ಮತ್ತು 8ಬಿಎಚ್‌ಪಿ ಮತ್ತು 0.89 ಕಿಲೋಗ್ರಾಂ ಟಾರ್ಕ್ ಹೊಂದಿದೆ. ಈ ವಾಹನಗಳ ಎರಡು ಚಕ್ರಗಳು ಕಾಂಬಿ-ಬ್ರೇಕಿಂಗ್ ಸಿಸ್ಟಮ್, ಡ್ರಮ್ ಬ್ರೇಕ್ ವೈಶಿಷ್ಟವನ್ನು ಹೊಂದಿದೆ.  
 
ಈ ಹೊಸ ಆವೃತ್ತಿಯ ಡಿಯೊ ದ್ವಿಚಕ್ರ ವಾಹನಗಳು ಜಾಝಿ ಬ್ಲೂ ಮೆಟಲ್, ಕ್ಯಾಂಡಿ ಪಾಮ್ ಗ್ರೀನ್, ಸ್ಪೋರ್ಟ್ಸ್ ರೆಡ್ ಮತ್ತು ಬ್ಲಾಕ್ ಬಣ್ಣದಲ್ಲಿ ಲಭ್ಯವಿದೆ.

ವೆಬ್ದುನಿಯಾವನ್ನು ಓದಿ