ಹೊಂಡಾ ಮರಳಿ ಪಡೆಯುತ್ತಿದೆ 31000 ಕಾರುಗಳು

ಮಂಗಳವಾರ, 6 ಮೇ 2014 (15:33 IST)
ಹೊಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್‌‌ ತನ್ನ ಕಂಪ್ಯಾಕ್ಟ್ ಸೆಡಾನ್ ಅಮೆಜ್ ಮತ್ತು ಬ್ರಿಯೊ ಮಾಡೆಲ್‌‌‌‌ನ 31,226 ಕಾರುಗಳನ್ನು ಮರಳಿ ಪಡೆಯಲಿದೆ. ಈ ಕಾರುಗಳ ಸಿಸ್ಟಮ್‌‌ನಲ್ಲಿ ತೊಂದರೆ ಇದ್ದ ಕಾರಣ ಇವುಗಳನ್ನು ಮರಳಿ ಪಡೆಯಲಾಗುತ್ತಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. 
 
ಫೆಬ್ರುವರಿ 28 , 2013 ರಿಂದ ಜನೆವರಿ 2014ರ ನಡುವೆ ಉತ್ಪಾದಿಸಲಾದ ಕಾರುಗಳನ್ನು ಮರಳಿ ಪಡೆಯಲಾಗುತ್ತಿದೆ. ಇದರಲ್ಲಿ ಎರಡು ಮಾಡೆಲ್‌‌ನ ಎಬಿಎಚ್‌‌ ವೆರಿಯೆಂಟ್‌‌ ಇರುವುದಿಲ್ಲ. ಈ ನಿರ್ಧಾರದ ಮೂಲಕ 15,623 ಬ್ರಿಯೊ ಮತ್ತು 15,6032 ಪೆಟ್ರೋಲ್ ಅಮೆಜ್ ಕಾರುಗಳನ್ನು ಮರಳಿ ಪಡೆಯಲಾಗುತ್ತಿದೆ. 
 
ಕಂಪೆನಿ ಈ ಕಾರುಗಳ ರಿಪ್ಲೇಸ್‌ಮೆಂಟ್‌‌ನ ಶುಲ್ಕವನ್ನು ತಗೆದುಕೊಳ್ಳುವುದಿಲ್ಲ. ಕೆಲವು ಕಾರುಗಳಲ್ಲಿ ಪ್ರಪೊಶನಿಂಗ್ ವಾಲ್ವ ಅಳವಡಿಸಲಾಗಿದೆ. ಇದರಿಂದ  ಉಂಟಾದ ತೊಂದರೆಯನ್ನು ಸರಿಪಡಿಸಲಾಗುವುದು ಎಂದು ಕಂಪೆನಿ ತಿಳಿಸಿದೆ. ಕಳೆದ ತಿಂಗಳು ಕಂಪೆನಿ ಅರ್ಟಿಗಾ, ಸ್ವಿಪ್ಟ್‌ ಮತ್ತು ಡಿಜಾಯರ್‌ ಮಾಡೆಲ್‌‌ನ 1,03,311 ಕಾರುಗಳನ್ನು ಮರಳಿ ಪಡೆಯಲಾಗುವುದು ಎಂದು ಕಂಪೆನಿ ಘೋಷಿಣೆ ಮಾಡಿತ್ತು.

ವೆಬ್ದುನಿಯಾವನ್ನು ಓದಿ