ಹೋಂಡಾ ಕಾರುಗಳು ಮತ್ತಷ್ಟು ತುಟ್ಟಿ

ಶನಿವಾರ, 17 ಡಿಸೆಂಬರ್ 2016 (10:17 IST)
ಹೋಂಡಾ ಕಾರುಗಳ ಬೆಲೆ ಹೆಚ್ಚಾಗಲಿದೆ. ಜನವರಿ 2017ರಿಂದ ಕಾರುಗಳ ಬೆಲೆಯನ್ನು ಹೆಚ್ಚಿಸುತ್ತಿರುವುದಾಗಿ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಹೆಚ್‌ಸಿಐಎಲ್) ಪ್ರಕಟಣೆಯೊಂದರಲ್ಲಿ ತಿಳಿಸಿದೆ. ಶೇ.3ರಷ್ಟು ಈ ಏರಿಕೆ ಇರಲಿದೆಯಂತೆ.
 
ತಯಾರಿ ಖರ್ಚು, ವಿನಿಮಯ ದರ ಹೆಚ್ಚಾದ ಕಾರಣ ಕಾರುಗಳ ಬೆಲೆಯನ್ನು ಏರಿಸುವುದು ಅನಿವಾರ್ಯವಾಗಿದೆ ಎಂದು ಹೆಚ್‌‍ಸಿಐಎಲ್ ಅಧ್ಯಕ್ಷ, ಸಿಇಓ ಓಯಿಚಿರೋ ಯುಎನೋ ತಿಳಿಸಿದ್ದಾರೆ. ಈ ಮೇರೆಗೆ ಹೋಂಡಾ ಕಾರಿನ ಎಲ್ಲಾ ಮಾಡೆಲ್‌ಗಳ ಬೆಲೆಯಲ್ಲಿ ಏರಿಕೆಯಾಗಲಿದೆ.
 
ಹೋಂಡಾ ಬ್ರಿಯೋ, ಹೋಂಡಾ ಜಾಜ್, ಹೋಂಡಾ ಅಮೇಜ್, ಹೋಂಡಾ ಮೊಬಿಲಿ, ಹೋಂಡಾ ಸಿಟಿ, ಹೋಂಡಾ ಬಿಆರ್-ವಿ, ಹೋಂಡಾ ಸಿಆರ್-ವಿ ಸೇರಿದಂತೆ ಇತ್ತೀಚೆಗೆ ಬಿಡುಗಡೆಯಾದ್ದ ಅಕಾರ್ಟ್ ಹೈಬ್ರಿಡ್ ವಾಹನಗಳನ್ನು ಹೆಚ್‌ಸಿಐಎಲ್ ತಯಾರಿಸುತ್ತದೆ. ಇವುಗಳ ಬೆಲೆ ರೂ.4.69 ಲಕ್ಷದಿಂದ ರೂ. 37 ಲಕ್ಷಗಳವರೆಗಿದೆ. 
 
ಈಗಾಗಲೆ ಹುಂಡೈ ಮೋಟಾರ್ ಇಂಡಿಯಾ, ನಿಸ್ಸಾನ್, ಟೊಯೊಟೋ, ರೆನೋ, ಮರ್ಸಿಡೆಸ್ ಬೆಂಜ್, ಟಾಟಾ ಮೋಟಾರ್ಸ್ ಕಂಪನಿಗಳು ತಮ್ಮ ಕಾರುಗಳ ಬೆಲೆಗಳನ್ನು ಜಾಸ್ತಿ ಮಾಡಿವೆ. ಇದೀಗ ಈ ಸಾಲಿಗೆ ಹೊಸ ಸೇರ್ಪಡೆ ಹೋಂಡಾ ಕಾರ್ಸ್. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ